ಗುರುವಾರ , ಜನವರಿ 21, 2021
18 °C
ರಾಜ್ಯಸಭಾ ಸದಸ್ಯ, ಶಿವಸೇನಾ ಮುಖಂಡ ರಾವುತ್ ಪ್ರಶ್ನೆ

ಔರಂಗಜೇಬ್‌ ಜಾತ್ಯಾತೀತನಾಗಿರಿಲ್ಲ, 'ಸಂಭಾಜಿನಗರ' ಅನ್ನುವುದು ತಪ್ಪಲ್ಲ: ರಾವುತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯು(ಸಿಎಂಒ) ಔರಂಗಾಬಾದ್‌ ಅನ್ನು ಸಂಭಾಜಿನಗರ ಎಂದು ಉಲ್ಲೇಖಿಸಿರುವುದನ್ನು ಸಮರ್ಥಿಸಿರುವ ಶಿವಸೇನಾ ನಾಯಕ ಸಂಜಯ್‌ ರಾವುತ್‌, ಸರ್ಕಾರಿ ದಾಖಲೆಗಳಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್‌ ಅವರ ಹೆಸರನ್ನು ಬಳಸುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ. 

ಔರಂಗಾಬಾದ್‌ ಬದಲು ಸಂಭಾಜಿನಗರ ಎಂದು ಬಳಸಿರುವುದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾವುತ್‌, ‘ಸಿಎಂಒ ಟ್ವೀಟ್‌ನಲ್ಲಿ ಸಂಭಾಜಿನಗರ ಎಂದು ಬಳಸಿರುವುದು ಸರಿಯಾಗಿದೆ. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ ಅವರು ಸಂಭಾಜಿನಗರ ಎಂದು ಹೆಸರು ನೀಡಿದ್ದರು. ಅದು ಹಾಗೆಯೇ ಉಳಿಯಲಿದೆ. ಹೆಸರು ಬದಲಾವಣೆಗೆ ಕಾಂಗ್ರೆಸ್‌ ವಿರೋಧವಿಲ್ಲ. ಹೀಗಿದ್ದರೂ, ಪ್ರಸ್ತಾವಕ್ಕೆ ಸಾರ್ವಜನಿಕವಾಗಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಔರಂಗಜೇಬ್‌ ಜಾತ್ಯಾತೀತ ವ್ಯಕ್ತಿಯಾಗಿರಲಿಲ್ಲ’ ಎಂದಿದ್ದಾರೆ. 

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆಗೂಡಿ ಅಧಿಕಾರ ನಡೆಸುತ್ತಿರುವ ಶಿವಸೇನಾ, ಹಿಂದಿನಿಂದಲೂ ಔರಂಗಾಬಾದ್‌ ಹೆಸರು ಬದಲಾವಣೆಗೆ ಬೇಡಿಕೆ ಇರಿಸುತ್ತಿದೆ. ಆದರೆ, ಮಹಾರಾಷ್ಟ್ರ ಸಚಿವ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಾಳಾಸಾಹೆಬ್‌ ಥೋರಟ್‌ ಅವರು ಔರಂಗಾಬಾದ್‌ ಹೆಸರು ಬದಲಾವಣೆಗೆ ತಮ್ಮ ಪಕ್ಷವು ತೀವ್ರವಾಗಿ ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ‘ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು ತನ್ನಷ್ಟಕ್ಕೇ ನಗರವೊಂದರ ಹೆಸರು ಬದಲಾಯಿಸಬಾರದು’ ಎಂದು ಸಿಎಂಒ ಟ್ವೀಟ್‌ ಬೆನ್ನಲ್ಲೇ ಪ‍್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು