ಖಾಸಗಿ ಉಡಾವಣಾ ವಾಹಕಕ್ಕೆ ಇಸ್ರೊ ರಾಕೆಟ್ ವ್ಯವಸ್ಥೆ ನೆರವು

ಬೆಂಗಳೂರು: ದೇಶದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ಉಪಗ್ರಹ ಉಡಾವಣಾ ರಾಕೆಟ್‌ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇದೇ ಮೊದಲ ಬಾರಿಗೆ ತನ್ನ ರಾಕೆಟ್ ವ್ಯವಸ್ಥೆಯನ್ನು ನೀಡಿದೆ.
ಚೆನ್ನೈ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮ ಅಗ್ನಿಕುಲ್ ಕಾಸ್ಮೋಸ್ ಮೊದಲ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ಅನ್ನು (ಬಾಹ್ಯಾಕಾಶ ನೌಕೆ ಉಡಾವಣೆಯ ಸಂಪೂರ್ಣ ವ್ಯವಸ್ಥೆ) ಪಡೆದುಕೊಂಡಿದೆ. ಇದನ್ನು ನವೆಂಬರ್ 7ರಂದು ಹಸ್ತಾಂತರಿಸಲಾಗಿದೆ ಎಂದು ಇಸ್ರೊ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಖಾಸಗಿ ವಲಯದ ಬಾಹ್ಯಾಕಾಶ ಆಧಾರಿತ ಚಟುವಟಿಕೆಗಳನ್ನು ಉತ್ತೇಜಿಸಲು, ಅನುಮತಿ ನೀಡಲು ಮತ್ತು ಮೇಲ್ವಿಚಾರಣೆ ನಡೆಸಲು ಏಕ ಗವಾಕ್ಷಿಯ ಸ್ವಾಯತ್ತ ಸರ್ಕಾರಿ ಸಂಸ್ಥೆ ಐಎನ್–ಸ್ಪೇಸ್ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಢೀಕರಣ ಕೇಂದ್ರ) ಬೆಂಬಲದಲ್ಲಿ ಅಗ್ನಿಕುಲ್ ಕಾಸ್ಮೋಸ್ ನವೋದ್ಯಮವು ‘ಅಗ್ನಿಬಾನ್’ ಹೆಸರಿನ ಉಡಾವಣಾ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ತಿರುವನಂತಪುರದಲ್ಲಿ ಇತ್ತೀಚೆಗಷ್ಟೇ ಈ ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.