ಗುರುವಾರ , ಮಾರ್ಚ್ 23, 2023
28 °C

ವಾಣಿಜ್ಯಾತ್ಮಕ ಉಡಾವಣೆಯಲ್ಲಿ ಇಸ್ರೊ ಯಶಸ್ವಿ: 36 ಉಪಗ್ರಹ ಕಕ್ಷೆಗೆ, ಇತಿಹಾಸ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3-M2 ಉಡಾವಣೆ ಯಶಸ್ವಿಯಾಗಿದೆ.

ಇದು ವಾಣಿಜ್ಯ ಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್‌ನ ಮೂಲದ ಒನ್‌ವೆಬ್‌ ಲಿಮಿಟೆಡ್‌ನ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ. ಉಪಗ್ರಹಗಳು ಕಕ್ಷೆ ಸೇರಿವೆ ಎಂದು ಖಚಿತಪಡಿಸಿರುವ ಇಸ್ರೊ ಇತಿಹಾಸ ನಿರ್ಮಿಸಿದೆ. 

43.5 ಮೀಟರ್ ಎತ್ತರದ,  644 ಟನ್‌ ತೂಕದ ರಾಕೆಟ್  ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಅಕ್ಟೋಬರ್ 23ರ ಮಧ್ಯರಾತ್ರಿ ಸರಿಯಾಗಿ 12.7ಕ್ಕೆ ಉಡಾವಣೆಗೊಂಡಿತು.  

ಒನ್‌ ವೆಬ್‌ ಒಂದು ಖಾಸಗಿ ಉಪಗ್ರಹ ಸಂವಹನ ಕಂಪನಿಯಾಗಿದ್ದು, ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರ ಮತ್ತು ಷೇರುದಾರ.

LVM3-M2 ರಾಕೆಟ್‌ 8,000 ಕೆ.ಜಿ.ವರೆಗಿನ ಉಪಗ್ರಹ ಸಾಗಿಸುವ ಸಾಮರ್ಥ್ಯ ಹೊಂದಿದೆ. 

ಒನ್‌ ಒಬ್‌ನ  ಇನ್ನೂ 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತೊಂದು ಕಾರ್ಯಾಚರಣೆ 2023ರ ಜನವರಿಯಲ್ಲಿ ನಿಗದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು