ಚಿಪ್ ಉತ್ಪಾದನೆ: ಇಂಟೆಲ್ಗೆ ಆಹ್ವಾನ ನೀಡಿದ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಅಮೆರಿಕದ ಸೆಮಿ ಕಂಡಕ್ಟರ್ ಮತ್ತು ಚಿಪ್ ಉತ್ಪಾದಕ ಸಂಸ್ಥೆ ಇಂಟೆಲ್ಗೆ ಭಾರತದಲ್ಲಿ ಘಟಕ ಸ್ಥಾಪಿಸಲು ಐಟಿ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತ ಕೋರಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಸೆಮಿ ಕಂಡಕ್ಟರ್ ಡಿಸೈನ್ ಮತ್ತು ಚಿಪ್ಗಳನ್ನು ತಯಾರಿಸುವ ಘಟಕವನ್ನು ಆರಂಭಿಸುತ್ತಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಇಂಟೆಲ್ ಫೌಂಡ್ರಿ ಸರ್ವಿಸ್ನ ಅಧ್ಯಕ್ಷ ರಣಧೀರ್ ಠಾಕೂರ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, 'ಇಂಟೆಲ್ಗೆ ಸ್ವಾಗತ' ಎಂದಿದ್ದಾರೆ.
ಇತ್ತೀಚೆಗೆ ರಾಷ್ಟ್ರದಲ್ಲಿ ಸೆಮಿ ಕಂಡಕ್ಟರ್ ಮತ್ತು ಚಿಪ್ ಉತ್ಪಾದನೆಗೆ ಸಂಬಂಧಿಸಿ 76,000 ಕೋಟಿ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ 35,000 ಮಂದಿಗೆ ಉದ್ಯೋಗ ಮತ್ತು 1 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗಕ್ಕೆ ದಾರಿಯಾಗಲಿದೆ ಎಂದು ಬಣ್ಣಿಸಲಾಗಿದೆ.
Intel - welcome to India. https://t.co/1Wy90HfAjy
— Ashwini Vaishnaw (@AshwiniVaishnaw) December 28, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.