ಸೋಮವಾರ, ಮಾರ್ಚ್ 27, 2023
29 °C

ರಸ್ತೆ ನಿರ್ಮಾಣ: ಐಟಿಬಿಪಿಯಿಂದ ಎಂಜಿನಿಯರಿಂಗ್ ವಿಭಾಗ ನಿಯೋಜನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ರಸ್ತೆ ಮತ್ತು ಕಾಲುದಾರಿಗಳನ್ನು ನಿರ್ಮಿಸಲು ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯು (ಐಟಿಬಿಪಿ) ತನ್ನದೇ ಆದ ವಿಶೇಷ ಎಂಜಿನಿಯರಿಂಗ್ ವಿಭಾಗವನ್ನು ನಿಯೋಜಿಸಲು ಮೊದಲ ಬಾರಿಗೆ ನಿರ್ಧಾರ ಕೈಗೊಂಡಿದೆ.

ಪೂರ್ವ ಲಡಾಖ್‌ ಪ್ರದೇಶದಲ್ಲಿ ಚೀನಾದೊಂದಿಗೆ ತಲೆದೋರಿರುವ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಗೃಹ ಸಚಿವಾಲಯವು ಐಟಿಬಿಪಿಯ ಈ ಕ್ರಮವನ್ನು ಅನುಮೋದಿಸಿದೆ.

ಇಂಡೊ-ಚೀನಾ ಗಡಿ ರಸ್ತೆಗಳ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರದಿಂದ ಮಂಜೂರಾಗಿರುವ 32 ರಸ್ತೆಗಳ ಪೈಕಿ ನಾಲ್ಕು ರಸ್ತೆಗಳನ್ನು ಮತ್ತು 18 ಕಾಲುದಾರಿಗಳ ಪೈಕಿ ಎರಡು ಕಾಲುದಾರಿಗಳನ್ನು ನಿರ್ಮಿಸುವ ಸವಾಲು ಐಟಿಬಿಪಿ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿಬಿಪಿಯ ಎಂಜಿನಿಯರ್‌ಗಳು ಮತ್ತು ಮೇಲ್ವಿಚಾರಕರು ರಸ್ತೆ ಕಾಮಗಾರಿಗಳ ಮೇಲ್ವಿಚಾರಣೆ ವಹಿಸಲಿದ್ದಾರೆ. ಕಾರ್ಮಿಕರನ್ನು ಸರ್ಕಾರದ ನಿಯಮಗಳ ಪ್ರಕಾರ ನೇಮಕಗೊಳಿಸಲಾಗುವುದು ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು