ಹೈದರಾಬಾದ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿವೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ, ನಗರಾಭಿವೃದ್ಧಿಸಚಿವ ಕೆ.ಟಿ ರಾಮಾರಾವ್ (ಕೆಟಿಆರ್) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗುಜರಾತ್‌ನಿಂದ, ಗುಜರಾತ್‌ಗಾಗಿ, ಗುಜರಾತಿಗೋಸ್ಕರ’ ಇದು ಮೋಡೆಮಾಕ್ರಸಿಯ ಹೊಸ ವ್ಯಾಖ್ಯಾನ ಎಂದು ಶುಕ್ರವಾರ ಟ್ವೀಟ್‌ನಲ್ಲಿ ಕೆಟಿಆರ್ ವ್ಯಂಗ್ಯವಾಡಿದ್ದಾರೆ.

ಗುಜರಾತ್‌ಗೆ ಎಲೆಕ್ಟ್ರಿಕ್ ಲೋಕೋಮೋಟಿವ್ ಎಂಜಿನ್ ಯೋಜನೆಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಸಂಸತ್ತಿನಲ್ಲೇ ಭರವಸೆ ನೀಡಿದ ಹೊರತಾಗಿಯೂ, ತೆಲಂಗಾಣದ ವಾರಂಗಲ್‌ಗೆ ಇಂಜಿನ್ ಕೋಚ್ ಕಾರ್ಖಾನೆ ನಿರಾಕರಿಸಲಾಗಿದೆ. ‘ಎನ್‌ಪಿಎ’ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ಕೆಟಿಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟಿಆರ್ ಅವರು ಎನ್‌ಡಿಎ ಸರ್ಕಾರವನ್ನು ಇತ್ತೀಚೆಗೆ ಎನ್‌ಪಿಎ (ಅನುತ್ಪಾದಕ) ಎಂದು ಗೇಲಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.