ಶುಕ್ರವಾರ, ಅಕ್ಟೋಬರ್ 22, 2021
29 °C

ಅ.10ರಿಂದ ನಾಲ್ಕು ದಿನ ಸಚಿವ ಜೈಶಂಕರ್‌ ವಿದೇಶ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾನುವಾರದಿಂದ (ಅಕ್ಟೋಬರ್‌ 10) ಇದೇ 13 ರವರೆಗೆ ನಾಲ್ಕು ದಿನಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಕಿರ್ಗಿಸ್ತಾನ, ಕಜಕಿಸ್ತಾನ ಮತ್ತು ಅರ್ಮೇನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ವೇಳೆ ಅವರು ರಾಷ್ಡ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಮತ್ತು ಅಫ್ಗಾನಿಸ್ತಾನದ ಬೆಳವಣಿಗೆಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.

‘ಮೂರು ದೇಶಗಳ ಜೊತೆಗಿನ ಈ ಭೇಟಿಯು ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಪ್ರಗತಿಯನ್ನು ಪರಿಶೀಲಿಸುತ್ತದೆ. ಈ ಪ್ರದೇಶಗಳ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಸಚಿವರ ಭೇಟಿ ಕುರಿತು ಶನಿವಾರ ಹೇಳಿದೆ.

ನೆರೆಹೊರೆಯ ದೇಶಗಳೊಂದಿಗಿನ ಬಾಂಧವ್ಯವವನ್ನು ಮುಂದುವರೆಸುವ ಸಂಕೇತವಾಗಿ ಈ ಭೇಟಿ ಇರಲಿದೆ. ಜೈಶಂಕರ್‌ ಅವರು ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಪ್ರಮುಖವಾಗಿ ಚರ್ಚಿಸುವ ನಿರೀಕ್ಷೆ ಇದೆ ಎಂದೂ ಅದು ಹೇಳಿದೆ.

ಜೈಶಂಕರ್‌ ಅವರು ಮೊದಲಿಗೆ ಕಿರ್ಗಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಮಯದಲ್ಲಿ ಕೆಲವು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಎಂಇಎ ಹೇಳಿದೆ.

ಜೈಶಂಕರ್‌ ಅವರು ವಿದೇಶಾಂಗ ಸಚಿವರಾದ ಮೇಲೆ ಕಿರ್ಗಿಸ್ತಾನಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.

ಅಕ್ಟೋಬರ್‌ 11 ರಿಂದ 12ರವರೆಗೆ ಜೈಶಂಕರ್‌ ಅವರು ಕಜಕಿಸ್ತಾನದಲ್ಲಿ ಏಷ್ಯಾದಲ್ಲಿ ಸಂವಹನ ಮತ್ತು ಆತ್ಮವಿಶ್ವಾಸ ನಿರ್ಮಾಣ ಕ್ರಮಗಳ ಸಮ್ಮೇಳನದ 6ನೇ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಜೈಶಂಕರ್‌ ಅವರು ಉಪಪ್ರಧಾನಿ ಮತ್ತು ಕಜಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎಂದು ಎಂಇಎ ಮಾಹಿತಿ ನೀಡಿದೆ.  

‘ಅಕ್ಟೋಬರ್‌ 12 ರಿಂದ 13ರವರೆಗೆ ಸಚಿವರು ಅರ್ಮೇನಿಯಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಸ್ವತಂತ್ರ ದೇಶಕ್ಕೆ ಜೈಶಂಕರ್‌ ಅವರ ಮೊದಲ ಭೇಟಿ ಇದಾಗಿದೆ ಎಂದು ಎಂಇಎ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು