ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಪರಿವರ್ತನೆ ಬೇಕಾಗಿಲ್ಲ: ದೀದಿ ಮರು ಆಯ್ಕೆಗೆ ಜಯಾ ಮನವಿ

ಕೋಲ್ಕತ್ತದಲ್ಲಿ ಟಿಎಂಸಿ ರೋಡ್‌ ಶೋ l ನಾವೇ ಒಳಗಿನವರು– ನಡ್ಡಾ
Last Updated 15 ಏಪ್ರಿಲ್ 2021, 20:09 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಬಂಗಾಳದಲ್ಲಿ ನಮಗೆ ಪರಿವರ್ತನೆ ಬೇಕಾಗಿಲ್ಲ. ದಯವಿಟ್ಟು ದೀದಿ (ಮಮತಾ ಬ್ಯಾನರ್ಜಿ) ಅವರನ್ನೇ ಮರು ಆಯ್ಕೆ ಮಾಡಿ, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅವರಿಗೆ ನೆರವಾಗಿ’ ಎಂದು ಚಿತ್ರನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ಮನವಿ ಮಾಡಿದರು.

ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ರೋಡ್‌ ಶೋದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು. ಟಿಎಂಸಿ ಅಭ್ಯರ್ಥಿಗಳ ಪರವಾಗಿ ಜಯಾ ಅವರು ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

4 ಕಿ.ಮೀ ದೂರದ ರೋಡ್‌ ಶೋದಲ್ಲಿ ಮಮತಾ ಅವರು ಗಾಲಿಕುರ್ಚಿಯಲ್ಲಿ ಸಂಚರಿಸಿದರು. ಪಕ್ಷದ ಸಾವಿರಾರು ಮಂದಿ ಕಾರ್ಯಕರ್ತರೂ ಇದ್ದರು.

ಒಳಗಿನವರು ನಾವೇ: ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ 10 ವರ್ಷಗಳ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭ್ರಷ್ಟಾಚಾರ ಮತ್ತು ಸುಲಿಗೆಕೋರರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಅವರು ಅಧಿಕಾರದಿಂದ ಶಾಶ್ವತವಾಗಿ ನಿರ್ಗಮಿಸುವ ರೀತಿಯಲ್ಲಿ ಈ ಬಾರಿ ಮತದಾನ ಮಾಡಬೇಕು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮನವಿ ಮಾಡಿದ್ದಾರೆ.

ನಡ್ಡಾ ಅವರು ರಾಜ್ಯದಲ್ಲಿ ಗುರುವಾರ ನಾಲ್ಕು ಪ್ರಚಾರ ರ್‍ಯಾಲಿಗಳಲ್ಲಿ ಭಾಗವಹಿಸಿದ್ದರು.

ಮಮತಾ ಅವರು ಬಿಜೆಪಿಯವರನ್ನು ‘ಹೊರಗಿನವರು’ ಎಂದು ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ನಡ್ಡಾ, ‘ಬಂಗಾಳದ ತತ್ವಜ್ಞಾನಿಗಳ ಸಂದೇಶವನ್ನು ದೇಶದಾದ್ಯಂತ ಪ್ರಚಾರ ಮಾಡಿರುವ ನಾವೇ ನಿಜವಾದ ‘ಒಳಗಿನವರು’ ಎಂದರು.

ಸಾಯಂತನ್‌ಗೆ ನೋಟಿಸ್‌

ಉತ್ತರ 24ಪರಗಣ ಜಿಲ್ಲೆಯಲ್ಲಿ ಮಾಡಿರುವ ಭಾಷಣವೊಂದಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಸ್ಪಷ್ಟನೆ ನೀಡುವಂತೆ ಬಿಜೆಪಿ ಮುಖಂಡ ಸಾಯಂತನ್‌ ಬಸು ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್‌ ನೀಡಿದೆ.ಚುನಾವಣಾ ರ್‍ಯಾಲಿಯೊಂದರಲ್ಲಿ ಸಾಯಂತನ್‌ ಅವರು, ‘ಶೋಲೆ ಸಿನಿಮಾದಲ್ಲಿ ಒಂದು ಡೈಲಾಗ್‌ ಇದೆ. ನೀವು ನಮ್ಮ ಕಡೆಯ ಒಬ್ಬನನ್ನು ಕೊಂದರೆ ನಿಮ್ಮಕಡೆಯ ನಾಲ್ವರನ್ನು ನಾವು ಕೊಲ್ಲುತ್ತೇವೆ... ಎಂದು. ಶೀತಲಕುಚ್ಚಿಯು ಇದಕ್ಕೆ ಸಾಕ್ಷಿಯಾಗಿದೆ....’ ಎಂದಿದ್ದರು ಎನ್ನಲಾಗಿದೆ.

‘ಈ ಭಾಷಣದ ವಿಚಾರವಾಗಿ 24 ಗಂಟೆಗಳೊಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಚುನಾವಣಾ ಆಯೋಗ ನೀಡಿರುವ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಆದರೆ ಈ ಭಾಷಣದ ಧ್ವನಿಮುದ್ರಿಕೆಯಲ್ಲಿ ಕೆಲವು ಭಾಗ ಸ್ಪಷ್ಟವಾಗಿ ಕೇಳಿಸುತ್ತಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT