ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ದಿನಗಳು: ಕರ್ನಾಟಕ ವಿಧಾನಮಂಡಲ ಮೊದಲು

Last Updated 6 ಜೂನ್ 2021, 19:41 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನ ಮಂಡಲವು ಕೋವಿಡ್‌ ಸಂಕಷ್ಟ ಮತ್ತು ನಿರ್ಬಂಧಗಳ ನಡುವೆಯೂ 2020ರಲ್ಲಿ ಅತಿ ಹೆಚ್ಚು ದಿನಗಳ ಕಲಾಪವನ್ನು ನಡೆಸಿದೆ ಮತ್ತು ಅತಿ ಹೆಚ್ಚು ಮಸೂದೆಗಳಿಗೆ ಅಂಗೀಕಾರ ನೀಡಿದೆ.

ಕರ್ನಾಟಕದಲ್ಲಿ ಒಟ್ಟು 31 ದಿನ ಕಲಾಪ ನಡೆದಿದೆ. ರಾಜಸ್ಥಾನ (29), ಹಿಮಾಚಲ ಪ್ರದೇಶ (25), ತಮಿಳು ನಾಡು, ಛತ್ತೀಸಗಡ ಮತ್ತು ಗುಜರಾತ್‌ (ತಲಾ 23 ದಿನಗಳು) ಮತ್ತು ಕೇರಳ (20) ನಂತರದ ಸ್ಥಾನಗಳಲ್ಲಿವೆ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆ ನಡೆಸಿದ ಅಧ್ಯಯನ ಹೇಳಿದೆ.

2016–19ರ ಅವಧಿಯನ್ನು ನೋಡಿದರೆ ಇತರ ರಾಜ್ಯಗಳಿಗಿಂತ ಕೇರಳ ಬಹಳ ಮುಂದೆ ಇದೆ. ಈ ಅವಧಿಯಲ್ಲಿ ಕೇರಳ ವಿಧಾನಸಭೆಯು ಪ್ರತಿ ವರ್ಷ ನಡೆಸಿದ ಕಲಾಪಗಳ ಸರಾಸರಿ ದಿನಗಳು 53. ಮಹಾರಾಷ್ಟ್ರವು 41 ದಿನಗಳ ಕಲಾಪ ನಡೆಸಿ ನಂತರದ ಸ್ಥಾನದಲ್ಲಿದೆ. ಕರ್ನಾಟಕದ ಸರಾಸರಿ 32 ದಿನಗಳು ಮಾತ್ರ.

2020ರಲ್ಲಿ ವಿಧಾನ ಸಭೆಗಳು ಅಂಗೀಕರಿಸಿದ ಸರಾಸರಿ ಮಸೂದೆಗಳ ಸಂಖ್ಯೆ 22. ಆದರೆ, ಕರ್ನಾಟಕ ವಿಧಾನ ಮಂಡಲವು 61 ಮಸೂದೆಗಳಿಗೆ ಅನುಮೋದನೆ ಕೊಟ್ಟಿದೆ. ಒಂದೇ ಒಂದು ಮಸೂದೆ ಅಂಗೀಕರಿಸಿದ ದೆಹಲಿ ಕೊನೆಯ ಸ್ಥಾನದಲ್ಲಿ ಇದೆ.

ರಾಜ್ಯಗಳು ಹೊರಡಿಸಿದ ಸುಗ್ರೀವಾಜ್ಞೆಗಳ ಸರಾಸರಿಯು ಕಳೆದ ವರ್ಷ 14 ಇತ್ತು. ಕೇರಳವು 81 ಸುಗ್ರೀವಾಜ್ಞೆ ಹೊರಡಿಸಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (24), ಉತ್ತರ ಪ್ರದೇಶ (23) ಮತ್ತು ಮಹಾರಾಷ್ಟ್ರ (21) ನಂತರದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT