ಬುಧವಾರ, ನವೆಂಬರ್ 25, 2020
20 °C

‘ಶ್ರೀಕುಟ್ಟಿ’ ಆನೆ ಮರಿಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ನಗರದಿಂದ 30 ಕಿ.ಮೀ. ದೂರದಲ್ಲಿರುವ ಕೋಟೂರಿನ ಅರಣ್ಯ ಇಲಾಖೆಯ ಆನೆ ಪುನರ್ವಸತಿ ಕೇಂದ್ರದಲ್ಲಿರುವ ‘ಶ್ರೀಕುಟ್ಟಿ’ ಹೆಸರಿನ ಆನೆ ಮರಿಯು ಭಾನುವಾರ ಮೊದಲ ವರ್ಷದ ಜನ್ಮದಿನ ಆಚರಿಸಿಕೊಂಡಿತು.

ಇಲಾಖೆ ಸಿಬ್ಬಂದಿಯು ಅಕ್ಕಿ ಹಾಗೂ ರಾಗಿಯಿಂದ ತಯಾರಿಸಿದ್ದ ಕೇಕ್‌ ಅನ್ನು ಆನೆ ಮರಿಯು ತನ್ನ ಸೊಂಡಿಲಿನಿಂದ ಕತ್ತರಿಸಿದ್ದು ನೆರೆದಿದ್ದವರ ಗಮನ ಸೆಳೆಯಿತು.

ಕಳೆದ ವರ್ಷದ ನವೆಂಬರ್‌ನಲ್ಲಿ ಕೊಲ್ಲಂ ಜಿಲ್ಲೆಯ ತೇನ್‌ಮಲೆ ಸಮೀಪದ ಎಸ್ಟೇಟ್‌ವೊಂದರ ಬಳಿ ಈ ಮರಿ ಸಿಕ್ಕಿತ್ತು. ಆಗ ಅದಕ್ಕೆ ಒಂದು ತಿಂಗಳ ಪ್ರಾಯ. ಆಗ ಈ ಮರಿ ಅಶಕ್ತವಾಗಿತ್ತು. ಇದು ಬದುಕುವುದೇ ಅನುಮಾನ ಎಂದು ಪುನರ್ವಸತಿ ಕೇಂದ್ರದ ಸಿಬ್ಬಂದಿ ಭಾವಿಸಿದ್ದರು. ಆದರೆ ಈಗ ಶ್ರೀಕುಟ್ಟಿ ತುಂಬಾ ಆರೋಗ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು