ಮಂಗಳವಾರ, ಮೇ 17, 2022
25 °C
ನ್ಯಾಯಾಲಯಕ್ಕೆ ಮೊರೆ

ಬಾಲಭಾಸ್ಕರ್‌ ಸಾವಿನ ಪ್ರಕರಣ: ಹೆಚ್ಚಿನ ತನಿಖೆಗೆ ತಂದೆಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ಸಂಗೀತಗಾರ ಬಾಲಭಾಸ್ಕರ್‌ ಅವರದ್ದು ನಿಗೂಢ ಸಾವು ಅಲ್ಲ ಎಂದು ಸಿಬಿಐ ತಿಳಿಸಿದ್ದರೂ ಅವರ ತಂದೆ ಹೆಚ್ಚಿನ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

2018ರ ಸೆಪ್ಟೆಂಬರ್‌ 25ರಂದು ಬಾಲಭಾಸ್ಕರ್‌ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ತಿರುವನಂತಪುರದ ಹೊರವಲಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬಾಲಭಾಸ್ಕರ್‌ ಹಾಗೂ ಅವರ ಎರಡು ವರ್ಷದ ಪುತ್ರಿ ತೇಜಸ್ವಿನಿ ಸಾವಿಗೀಡಾಗಿದ್ದರು. ಪತ್ನಿ ಲಕ್ಷ್ಮಿ ಹಾಗೂ ಕಾರು ಚಾಲಕ ಅರ್ಜುನ್‌ ಅವರಿಗೆ ಗಾಯಗಳಾಗಿದ್ದವು. ಅರ್ಜುನ್‌ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಬಾಲಭಾಸ್ಕರ್‌ ಅವರ ತಂದೆ ಸಿ.ಕೆ. ಉನ್ನಿ  ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಹತ್ವದ ವಿಷಯಗಳನ್ನು ಕೈಬಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಚಿನ್ನದ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಾಲಭಾಸ್ಕರ್‌ ಅವರ ಆಪ್ತರಾಗಿದ್ದ ಕೆಲವರನ್ನು ಬಂಧಿಸಿದ ಬಳಿಕ ಅಪಘಾತದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು.

ಫ್ಯೂಷನ್‌ ಸಂಗೀತದ ಕಲಾವಿದರಾಗಿದ್ದ  ಬಾಲಭಾಸ್ಕರ್‌ ಅವರು, ದೇಶ– ವಿದೇಶಗಳಲ್ಲಿ ಹೆಸರು ಮಾಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು