ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಅನುಕೂಲಕ್ಕಾಗಿ ಕಿಸಾನ್‌ ರೈಲು ಯೋಜನೆ: ಪ್ರಧಾನಿ ಮೋದಿ

Last Updated 9 ಆಗಸ್ಟ್ 2020, 11:14 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಉತ್ಪನ್ನಗಳನ್ನು ನಗರ ಪ್ರದೇಶಗಳಲ್ಲಿಯೂ ಮಾರಾಟ ಮಾಡಲು ಸಾಧ್ಯವಾಗುವುದರಿಂದಕಿಸಾನ್‌ ರೈಲು ಯೋಜನೆಯುದೇಶದಾದ್ಯಂತ ಇರುವ ರೈತರಿಗೆ ನರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಹಾಗೂ ಬಿಹಾರ ನಡುವೆ ದೇಶದ ಮೊದಲ ಕಿಸಾನ್‌ ರೈಲು ಆರಂಭವಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ,‘ದೇಶದ ಅತಿಸಣ್ಣ ರೈತರನ್ನೂ ಒಳಗೊಂಡಂತೆ 2 ದಿನಗಳ ಹಿಂದೆ ದೊಡ್ಡ ಯೋಜನೆಯನ್ನು ಆರಂಭಿಸಲಾಗಿದೆ. ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳ ನಡುವೆ ಕಿಸಾನ್‌ ರೈಲು ಸಂಚಾರ ಆರಂಭವಾಗಿದೆ’ ಎಂದು ತಿಳಿಸಿದ್ದಾರೆ.

‘ರೈತರು ಮುಂಬೈ ಮತ್ತು ಪುಣೆ ನಗರಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲಿದ್ದಾರೆ. ಈ ರೈಲು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಮೂಲಕ ಹಾದುಹೋಗುವುದರಿಂದ ಅಲ್ಲಿನ ರೈತರಿಗೂ ನೆರವಾಗಲಿದೆ. ಇದು ಹವಾನಿಯಂತ್ರಿತ ರೈಲು ಆಗಿದ್ದು, ತರಕಾರಿ ಪದಾರ್ಥಗಳನ್ನು ಸಂಗ್ರಹಿಸಿಡಲು ಶೈತ್ಯಾಗರ ವ್ಯವಸ್ಥೆಯನ್ನೂ ಹೊಂದಿದೆ. ಟ್ರಕ್‌ಗಳಿಗೆ ಹೋಲಿಸಿದರೆ ರೈಲಿನ ಶುಲ್ಕವೂ ಕಡಿಮೆ’ ಎಂದಿದ್ದಾರೆ.

ದೇಶದ ಮೊಟ್ಟ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಶುಕ್ರವಾರ ಹಸಿರುನಿಶಾನೆ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT