ಭಾನುವಾರ, ಏಪ್ರಿಲ್ 18, 2021
25 °C

ಕೋವಿಡ್–19 ಹೆಚ್ಚಳ: ಠಾಣೆ ನಗರದ 11 ಕಡೆ ಮಾ. 13ರಿಂದ 31ರವರೆಗೆ ಲಾಕ್‌ಡೌನ್

ಪಿಟಿಐ Updated:

ಅಕ್ಷರ ಗಾತ್ರ : | |

Lockdown

ಮುಂಬೈ: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ಠಾಣೆ ನಗರದ 11 ಹಾಟ್‌ಸ್ಟಾಟ್‌ಗಳಲ್ಲಿ ಮಾರ್ಚ್‌ 13ರಿಂದ 31ರ ವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಲಾಕ್‌ಡೌನ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಠಾಣೆ ಪಾಲಿಕೆ ಆಯುಕ್ತ ವಿಪಿನ್ ಶರ್ಮಾ ಹೇಳಿದ್ದಾರೆ.

ಈ ಹಿಂದೆ ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಏನೇನು ನಿಯಮಗಳು, ನಿರ್ಬಂಧಗಳು ಇದ್ದವೋ ಅವುಗಳೇ ಈಗಲೂ ಜಾರಿಯಲ್ಲಿರಲಿವೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರದ ವರೆಗಿನ ಲೆಕ್ಕಾಚಾರದ ಪ್ರಕಾರ, ಠಾಣೆಯಲ್ಲಿ 2,69,845 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. 6,302 ಸಾವು ಸಂಭವಿಸಿದೆ.

ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು