ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಧರ್ಮ ನೀವು ಅನುಸರಿಸಬೇಕಿದ್ದರೆ ಬಿಜೆಪಿಗೆ ಮತ ನೀಡಬೇಡಿ: ಮಮತಾ ಬ್ಯಾನರ್ಜಿ

ರಾಮನೂ ದುರ್ಗಯೆನ್ನು ಪೂಜಿಸುತ್ತಿದ್ದ ಎಂದ ಪಶ್ಚಿಮ ಬಂಗಾಳ ಸಿಎಂ
Last Updated 17 ಮಾರ್ಚ್ 2021, 10:26 IST
ಅಕ್ಷರ ಗಾತ್ರ

ಕೋಲ್ಕತ್ತ: ಭಗವಾನ್ ರಾಮ ಕೂಡ ಮಾತೆ ದುರ್ಗೆಯನ್ನು ಪೂಜಿಸುತ್ತಿದ್ದ. ಯಾಕೆಂದರೆ ದುರ್ಗೆಯ ಶ್ರೇಷ್ಟತೆ ತುಂಬಾ ಹಿರಿದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಝಾರ್‌ಗ್ರಾಮ್‌ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಧರ್ಮವನ್ನು ನೀವು ಅನುಸರಿಸಬೇಕು ಎಂದಿದ್ದರೆ ಬಿಜೆಪಿಗೆ ಮತ ನೀಡಬೇಡಿ. ಬಿಜೆಪಿಗೆ ಮತ ನೀಡಿದರೆ ನೀವು ‘ಜೈ ಶ್ರೀರಾಂ’ ಎಂದಷ್ಟೇ ಹೇಳಬೇಕಾಗುತ್ತದೆ. ‘ಜೈ ಸಿಯಾ ರಾಂ’ ಎನ್ನಲು ನಿಮಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಟಿಎಂಸಿ ಸರ್ಕಾರವು ಝಾರ್‌ಗ್ರಾಮ್‌ದಿಂದ ಬಡತನವನ್ನು ತೊಲಗಿಸಿದೆ. ಮತ್ತೊಂದೆಡೆ, ಬಿಜೆಪಿಯು ನೋಟು ರದ್ದತಿ ಮತ್ತು ಜನಸಾಮಾನ್ಯರನ್ನು ತೊಂದರೆಗೀಡುಮಾಡುವ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಅವರು ಟೀಕಿಸಿದ್ದಾರೆ.

ಈಗ ಆಟ ಆರಂಭವಾಗಿದೆ. ಈ ಆಟದಲ್ಲಿ ನೀವು ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಉಚ್ಚಾಟಿಸಲಿದ್ದೀರಿ. ಆ ಪಕ್ಷದ ನಾಯಕರನ್ನು ಮನೆಗೆ ಕಳುಹಿಸಲಿದ್ದೀರಿ ಎಂದು ಮಮತಾ ಹೇಳಿದ್ದಾರೆ.

ಚುನಾವಣೆಗೂ ಮುನ್ನ ನನ್ನನ್ನು ಹೊರಬರದಂತೆ ಮಾಡಲು ಅವರು (ಬಿಜೆಪಿಯವರು) ಬಯಸಿದ್ದರು. ಅವರು ನನ್ನ ಕಾಲಿಗೆ ಗಾಯವಾಗುವಂತೆ ಮಾಡಿದ್ದಾರೆ. ಅವರು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಇತ್ತೀಚೆಗೆ ಮಮತಾ ಅವರನ್ನು ಅಪರಿಚಿತರು ತಳ್ಳಿದ್ದರು. ಇದರಿಂದ ಅವರ ಕಾಲಿಗೆ ಗಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT