ಶುಕ್ರವಾರ, ಮಾರ್ಚ್ 24, 2023
22 °C

ಮುಂಬೈ ಆಸ್ಪತ್ರೆಯಲ್ಲಿ ಎಲ್‌ಪಿಜಿ ಸೋರಿಕೆ: ತಪ್ಪಿದ ದುರಂತ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಇಲ್ಲಿನ ಚಿಂಚ್‌ಪೋಕಲಿ ಪ್ರದೇಶದಲ್ಲಿರುವ, ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಆಡಳಿತಕ್ಕೊಳಪಟ್ಟ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರ ಎಲ್‌ಪಿಜಿ ಸೋರಿಕೆಯಾಗಿ ಆತಂಕಕ್ಕೆ ಕಾರಣವಾಯಿತು.

20 ಮಂದಿ ಕೋವಿಡ್ ಸೋಂಕಿತರೂ ಸೇರಿದಂತೆ 58 ರೋಗಿಗಳು ಆಸ್ಪತ್ರೆಯಲ್ಲಿದ್ದರು. ಇವರನ್ನು ಸ್ಥಳಾಂತರಿಸಲಾಗಿದೆ.

ಬೆಳಿಗ್ಗೆ 11.34ರ ವೇಳೆಗೆ ಎಲ್‌ಪಿಜಿ ಸೋರಿಕೆಯಾಗಿದೆ. ಇದು ರೋಗಿಗಳಲ್ಲಿ, ಅವರ ಕುಟುಂಬದವರಲ್ಲಿ ಮತ್ತು ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಯಿತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷತಾ ಕ್ರಮವಾಗಿ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು