ಲಖನೌ: ಇಲ್ಲಿನ ಲುಲು ಮಾಲ್‌ನಲ್ಲಿ ಮುಸ್ಲಿಂ ಯುವಕರು ನಮಾಜ್ ಮಾಡಿದ್ದಾರೆಂದು ಆರೋಪಿಸಿ ಮಾಲ್ ಅನ್ನು ‘ಪವಿತ್ರ’ಗೊಳಿಸಲು ತೆರಳಿದ ಆರೋಪ ಸಂಬಂಧ ಅಯೋಧ್ಯೆ ಮೂಲದ ಸಂತ ಪರಮಹಂಸ ಆಚಾರ್ಯ ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇತ್ತೀಚೆಗೆ ಲುಲು ಮಾಲ್‌ನಲ್ಲಿ ಯುವಕರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ವಿರೋಧಿಸಿ ಕೇಸರಿ ಕಾರ್ಯಕರ್ತರು ಪ್ರಕರಣ ದಾಖಲಿಸಿ, ಮಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾಗಿದ್ದರು. ಸದ್ಯ ಚಾಲೀಸಾ ಪಠಣಕ್ಕೆ ಮುಂದಾದವರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೆ ನಮಾಜ್ ಮಾಡಿದ ಆರೋಪ ಸಂಬಂಧ ಮಹಮ್ಮದ್ ರೆಹಾನ್, ಅತೀಫ್ ಖಾನ್, ಮಹಮ್ಮದ್ ಲುಕ್ಮಾನ್ ಮತ್ತು ಮಹಮ್ಮದ್ ನೂಮನ್ ಎಂಬವರನ್ನೂ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಘಟನೆ ನಂತರ ಮಾಲ್ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾಲ್‌ಗಳು ರಾಜಕೀಯ ಕುರುಕ್ಷೇತ್ರಗಳಾಗುತ್ತಿವೆ. ಕೋಮು ಸಾಮರಸ್ಯ ಕದಡಲು ಯತ್ನಿಸುವ ಸಣ್ಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಿ ಎಂದು ಈಚೆಗೆಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.