ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ| ಪೂರ್ವ ಅಂಧೇರಿ ಉಪ ಚುನಾವಣೆಯಲ್ಲಿ ಉದ್ಧವ್‌ ಬಣದ ಅಭ್ಯರ್ಥಿಗೆ ಗೆಲುವು

Last Updated 6 ನವೆಂಬರ್ 2022, 10:55 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಅಂಧೇರಿ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ಲಟ್ಕೆ ಅವರು ಭಾನುವಾರ ಗೆಲುವು ಸಾಧಿಸಿದ್ದಾರೆ.

ಈ ವರ್ಷದ ಮೇನಲ್ಲಿ ಶಿವಸೇನೆಯ ಶಾಸಕ ರಮೇಶ್ ಲಟ್ಕೆ ಅವರು ನಿಧನರಾಗಿದ್ದರು. ಶಿವಸೇನೆಯು ರಮೇಶ್‌ ಅವರ ಪತ್ನಿ ರುತುಜಾ ಲಟ್ಕೆ ಅವರನ್ನೇ ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯು ತನ್ನ ಜಂಟಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿತ್ತು. ನವೆಂಬರ್ 3ರಂದು ಮತದಾನ ನಡೆದಿತ್ತು.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಪತನಗೊಂಡು, ಏಕನಾಥ ಶಿಂದೆ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಲಾಗಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳು ರುತುಜಾ ಲಟ್ಕೆ ಅವರನ್ನು ಬೆಂಬಲಿಸಿದ್ದವು.

ರುತುಜಾ ಲಟ್ಕೆ ಅವರು 66,530 ಮತ ಪಡೆದ್ದಾರೆ. ಅವರ ಸಮೀಪ ಸ್ಪರ್ಧಿ, ಪಕ್ಷೇತರ ಅಭ್ಯರ್ಥಿ ರಾಜೇಶ್‌ ತ್ರಿಪಾಠಿ ಅವರು 1571 ಮತ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT