ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ಶಿವಸೇನಾದ 32 ಕಾರ್ಪೊರೇಟರ್‌ಗಳಿಂದ ಸಿಎಂ ಏಕನಾಥ ಶಿಂಧೆಗೆ ಬೆಂಬಲ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ನವಿ ಮುಂಬೈನ ಶಿವಸೇನಾ ಕಾರ್ಪೊರೇಟರ್‌ಗಳು ಬೆಂಬಲ ಸೂಚಿಸಿದ್ದಾರೆ.

32 ಶಿವಸೇನಾ ಕಾರ್ಪೊರೇಟರ್‌ಗಳ ನಿಯೋಗವು ಗುರುವಾರ ಏಕನಾಥ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

‘ನಾವು ಏಕನಾಥ ಶಿಂಧೆ ಅವರೊಂದಿಗೆ ಇರುತ್ತೇವೆ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಶಿಂಧೆ ಅವರಿಗೆ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸುತ್ತಾರೆ. ಅದು ಒಳ್ಳೆಯ ಬೆಳವಣಿಗೆ’ ಎಂದು ಕಾರ್ಪೊರೇಟರ್‌ಗಳು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ಜುಲೈ 4ರಂದು (ಸೋಮವಾರ) ವಿಶ್ವಾಸ ಮತ ಗೆದ್ದಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಎದ್ದ ಶಿಂಧೆ ಅವರು ಬಿಜೆಪಿ ಬೆಂಬಲದೊಂದಿಗೆಜೂನ್‌ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

288 ಸದಸ್ಯ ಬಲದ (ಈಗ 287 ಸದಸ್ಯರು ಇದ್ದಾರೆ) ವಿಧಾನಸಭೆಯಲ್ಲಿ ಶಿಂಧೆ ಅವರ ಪರವಾಗಿ 164 ಮತಗಳು ಚಲಾವಣೆ ಆದವು. ವಿಶ್ವಾಸಮತದ ವಿರುದ್ಧ 99 ಮತಗಳು ಚಲಾವಣೆ ಆಗಿವೆ. ಒಟ್ಟು 263 ಶಾಸಕರು ಮತ ಚಲಾಯಿಸಿದ್ದರು.

ಶಿಂಧೆ ಮತ್ತು ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರಕ್ಕೆ ಸಿಕ್ಕ ಎರಡನೇ ಮಹತ್ವದ ಗೆಲುವು ಇದು. ಜುಲೈ 3ರಂದು (ಭಾನುವಾರ) ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಗೆದ್ದಿದ್ದಾರೆ. ರಾಹುಲ್ ಅವರಿಗೆ 164 ಮತಗಳು ಸಿಕ್ಕಿದ್ದವು. ಮಹಾ ವಿಕಾಸ್ ಆಘಾಡಿಯ ಅಭ್ಯರ್ಥಿ ರಾಜನ್‌ ಸಲ್ವಿ ಅವರಿಗೆ 107 ಮತಗಳು ದೊರೆತಿದ್ದವು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT