ಶುಕ್ರವಾರ, ಜೂನ್ 25, 2021
22 °C
18–44 ವರ್ಷದವರಿಗೆ ಮೀಸಲಿಟ್ಟಿದ್ದ ಕೋವ್ಯಾಕ್ಸಿನ್‌ನ 3 ಲಕ್ಷ ಡೋಸ್‌ ಬಳಕೆ

ಮಹಾರಾಷ್ಟ್ರ: 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗೆ ಆದ್ಯತೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿಯೂ ಕೋವಿಡ್‌–19 ಲಸಿಕೆಯ ಕೊರತೆ ಕಂಡು ಬಂದಿದೆ. ಹೀಗಾಗಿ, 18–44 ವರ್ಷ ವಯೋಮಾನದವರಿಗೆ ನೀಡುವ ಉದ್ದೇಶದಿಂದ ತೆಗೆದಿರಿಸಿದ್ದ ಕೋವ್ಯಾಕ್ಸಿನ್‌ ಲಸಿಕೆಯ 3 ಲಕ್ಷ ಡೋಸ್‌ಗಳನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ರಾಜೇಶ್‌ ಟೋಪೆ, ‘45 ವರ್ಷ ಮೇಲ್ಪಟ್ಟ ವಯೋಮಾನದ 5 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆಯ ಎರಡನೇ ಡೋಸ್‌ ನೀಡಬೇಕಿದೆ’ ಎಂದರು.

‘ನಿಗದಿತ ಅವಧಿಯೊಳಗಾಗಿ ಎರಡನೇ ಡೋಸ್‌ ನೀಡದೇ ಇದ್ದರೆ, ಲಸಿಕೆ ಪರಿಣಾಮಕಾರಿಯಾಗದು. ಇದು ಪುನಃ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಎಡೆ ಮಾಡುತ್ತದೆ. ಇಂಥ ಸಂಕಷ್ಟ ಉದ್ಭವಿಸುವುದನ್ನು ತಡೆಯಲು 18–44 ವಯೋಮಾನದವರಿಗೆ ನೀಡಲು ತೆಗೆದಿಸಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದರು.

‘45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ ನೀಡಲು ಸರ್ಕಾರದ ಬಳಿ ಕೋವ್ಯಾಕ್ಸಿನ್‌ನ  35,000 ವಯಲ್‌ಗಳು ಮಾತ್ರ ಇವೆ’ ಎಂದೂ ಸಚಿವ ಟೋಪೆ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು