ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: ಉತ್ತರಾಖಂಡವನ್ನು ಕಾಡಿದ್ದ ಪ್ರಮುಖ ನೈಸರ್ಗಿಕ ವಿಕೋಪಗಳು

Last Updated 7 ಫೆಬ್ರುವರಿ 2021, 11:46 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಇಲ್ಲಿನ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಧೌಲಿಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸ್ಥಳದಲ್ಲಿನ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯುಂಟಾಗಿದೆ. ವಿದ್ಯುತ್ ಸ್ಥಾವರದಲ್ಲಿ 50 ರಿಂದ 100 ಮಂದಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, 150ಕ್ಕೂ ಅಧಿಕ ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಮೂರು ದಶಕಗಳಲ್ಲಿ ಉತ್ತರಾಖಂಡ ಎದುರಿಸಿದ ಪ್ರಮುಖ ನೈಸರ್ಗಿಕ ವಿಕೋಪಗಳು ಇವು:

* 1991 ಉತ್ತರಕಾಶಿ ಭೂಕಂಪ: ಅಕ್ಟೋಬರ್, 1991ರಲ್ಲಿ 6.8 ತೀವ್ರತೆಯ ಭೂಕಂಪನವು ಅವಿಭಜಿತ ರಾಜ್ಯವಾದ ಉತ್ತರ ಪ್ರದೇಶಕ್ಕೆ ಅಪ್ಪಳಿಸಿತು, ಇದರಲ್ಲಿ ಕನಿಷ್ಠ 768 ಜನರು ಮೃತಪಟ್ಟರು ಮತ್ತು ಸಾವಿರಾರು ಮನೆಗಳು ನಾಶವಾದವು.

* 1998 ಮಾಲ್ಪಾ ಭೂಕುಸಿತ: 1998ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪಿಥೋರಗಡ ಜಿಲ್ಲೆಯ ಮಾಲ್ಪಾ ಎಂಬ ಸಣ್ಣ ಗ್ರಾಮ ನಾಶವಾಯಿತು. ಇದರಲ್ಲಿ 55 ಕೈಲಾಸ ಮಾನಸಸರೋವರ ಯಾತ್ರಿಕರು ಸೇರಿದಂತೆ ಸುಮಾರು 255 ಜನರು ಮೃತಪಟ್ಟಿದ್ದಾರೆ. ಪರಿಣಾಮವಾಗಿ ಉಂಟಾದ ಭಗ್ನಾವಶೇಷವು ಶಾರದಾ ನದಿಯನ್ನು ಭಾಗಶಃ ನಿರ್ಬಂಧಿಸಿದೆ.

* 1999 ಚಮೋಲಿ ಭೂಕಂಪ: ಚಮೋಲಿ ಜಿಲ್ಲೆಯಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿ 100ಕ್ಕೂ ಹೆಚ್ಚು ಜನರು ಮೃತಪಟ್ಟರು. ಪಕ್ಕದ ರುದ್ರಪ್ರಯಾಗ್ ಜಿಲ್ಲೆಗೂ ಹೆಚ್ಚಿನ ಪರಿಣಾಮ ಬೀರಿತು. ಭೂಕಂಪದ ಪರಿಣಾಮವಾಗಿ ಹಲವಾರು ಭೂಪ್ರದೇಶಗಳು ವಿರೂಪಗೊಂಡಿದ್ದು ಮತ್ತು ಭೂಕುಸಿತ ಮತ್ತು ನೀರಿನ ಹರಿವಿನ ಬದಲಾವಣೆಗಳೂ ದಾಖಲಾಗಿವೆ. ರಸ್ತೆಗಳಲ್ಲಿ ಮತ್ತು ನೆಲದಲ್ಲಿ ಬಿರುಕುಗಳು ಕಂಡುಬಂದವು.

* 2013 ಉತ್ತರ ಭಾರತ ಪ್ರವಾಹ: 2013ರ ಜೂನ್‌ನಲ್ಲಿ ಸಂಭವಿಸಿದ ಹಲವು ದಿನಗಳ ಹಿಮಗಟ್ಟಿದ ಸರೋವರದ ಸ್ಫೋಟದಿಂದಾಗಿ ಉತ್ತರಾಖಂಡದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ಪ್ರಕಾರ, ಈ ದುರಂತದಲ್ಲಿ 5,700 ಕ್ಕೂ ಹೆಚ್ಚು ಜನರು ಸತ್ತಿದ್ದಾರೆಂದು ಭಾವಿಸಲಾಗಿದೆ. ಚಾರ್ ಧಾಮ್ ತೀರ್ಥಯಾತ್ರೆಯ ಸ್ಥಳಗಳನ್ನು ಸಂಪರ್ಕಿಸುವ ಸೇತುವೆಗಳು ಮತ್ತು ರಸ್ತೆಗಳು ನಾಶವಾಗುತ್ತಿದ್ದಂತೆ 3 ಲಕ್ಷಕ್ಕೂ ಹೆಚ್ಚು ಜನರು ಕಣಿವೆಯಲ್ಲಿ ಸಿಲುಕಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT