ತಿರುವನಂತಪುರ: ಭಾರತದ ಅನೇಕ ನಗರ, ಪಟ್ಟಣಗಳಲ್ಲಿ ಅತ್ಯಂತ ಕಳಪೆ ರಸ್ತೆಗಳು, ಗುಂಡಿ ಬಿದ್ದ ರಸ್ತೆಗಳು ಸರ್ವೇಸಾಮಾನ್ಯ. ಇದರಿಂದ ರೊಚ್ಚಿಗೆದ್ದು ಆಗಾಗ ನಾಗರಿಕರು ಪ್ರತಿಭಟನೆಗಳನ್ನು ಮಾಡುವುದೂ ಹೊಸದೇನಲ್ಲ.

ಹೀಗೆ, ಕೇರಳದಲ್ಲಿ ತನ್ನ ಕ್ಷೇತ್ರದಲ್ಲಿ ತೆರಳುತ್ತಿದ್ದ ಶಾಸಕರೊಬ್ಬರಿಗೆ ಅಚ್ಚರಿ ಕಾದಿತ್ತು. ರಸ್ತೆ ಎಂಬುದೇ ಕಾಣೆಯಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟ ತಮ್ಮೂರಿನರಸ್ತೆಯ ಪರಿಸ್ಥಿತಿಯನ್ನು ಯುವಕನೊಬ್ಬ ಆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದ ವಿಡಿಯೊ ವೈರಲ್ ಆಗಿದೆ.

ಕೇರಳದ ಮಲಪ್ಪುರಂನ ಪಂಡಿಕ್ಕಾಡುವಿನಲ್ಲಿ ರಣಭೂಮಿ ಎನ್‌ಜಿಒದ ಕಾರ್ಯಕರ್ತ ಹಮ್ಜಾ ಪೂರಲಿಯಿಲ್ ಎನ್ನುವರು ನೀರು ತುಂಬಿದ ರಸ್ತೆ ಗುಂಡಿಗಳಲ್ಲಿ ಸ್ನಾನ ಮುಗಿಸಿ, ಯೋಗ ಮಾಡಿದ್ದರ ಫೋಟೊ ವಿಡಿಯೊಗಳು ವೈರಲ್ ಆಗಿವೆ.

ಆಕಸ್ಮಿಕವಾಗಿ ಇದೇ ಮಾರ್ಗವಾಗಿ ಹೋಗುತ್ತಿದ್ದಪಂಡಿಕ್ಕಾಡು ಶಾಸಕ ಯು.ಎ ಲತೀಫ್ ಅವರು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ತಮ್ಮ ಕ್ಷೇತ್ರದ ಪರಿಸ್ಥಿತಿ ಕಂಡು ಇರಿಸುಮುರಿಸುಗೊಂಡಿದ್ದಾರೆ.

ಹಮ್ಜಾ ಅವರು ಪಂಡಿಕ್ಕಾಡುವಿನ ಭಯಾನಕ ರಸ್ತೆಗಳನ್ನು ಇದೇ ರೀತಿ ವಿನೂತನವಾಗಿ ತೋರಿಸುವ ಡಾಕುಮೆಂಟರಿ ಕೂಡ ಮಾಡಿದ್ದಾರೆ.

ವಿಶೇಷವೆಂದರೆ ಪಂಡಿಕ್ಕಾಡು ಊಟಿ ಹಾಗೂ ಪಾಲಕ್ಕಾಡ್ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.