ಮಂಗಳವಾರ, ಏಪ್ರಿಲ್ 20, 2021
31 °C

ಮಲಯಾಳಂ ಕವಿ ವಿ.ನಂಬೂದಿರಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ (ಪಿಟಿಐ): ಮಲಯಾಳಂನ ಖ್ಯಾತ ಕವಿ ವಿಷ್ಣುನಾರಾಯಣನ್‌ ನಂಬೂದಿರಿ (81) ಬುಧವಾರ ಮಧ್ಯಾಹ್ನ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.

ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದಲ್ಲಿ ಜನಿಸಿದ ನಂಬೂದಿರಿಯವರು ಸಮಕಾಲೀನ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಜನಮನ್ನಣೆ ಗಳಿಸಿದ ಕವಿಯಾಗಿದ್ದರು. 2014ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು ಎಳುತ್ತಚ್ಚನ್ ಪ್ರಶಸ್ತಿಗಳು ಇವರ ಮುಡಿಗೇರಿವೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವಾರು ಸಾಹಿತ್ಯ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.

ನಂಬೂದಿರಿ ಅವರು ರಚಿಸಿದ ಕೃತಿಗಳು ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಳಿತದ ಪ್ರಧಾನ ವಸ್ತುವಿಷಯಗಳಿಗೆ ಹೆಸರುವಾಸಿಯಾಗಿವೆ. ಇವರ ಗಮನಾರ್ಹ ಕೃತಿಗಳೆಂದರೆ ‘ಸ್ವಾದಂದ್ರ್ಯತ್ತೆ ಕುರಿಚ್ಚ್ ಒರು ಗೀದಂ’(ಸ್ವಾತಂತ್ರ್ಯದ ಕುರಿತ ಹಾಡು), ‘ಭೂಮಿಗೀದಂಙಳ್’(ಭೂಮಿಗೀತೆಗಳು), ‘ಇಂಡಿಯಾ ಎನ್ನ ವಿಗಾರಂ’(ಭಾರತ ಎಂಬ ಭಾವುಕತನ), ‘ಅಪರಾಜಿತ’, ‘ಆರಣ್ಯಗಂ’(ಆರಣ್ಯಕ), ‘ಪ್ರಣಯಗೀದಙಳ್’ (ಪ್ರಣಯಗೀತೆಗಳು) ಹಾಗೂ ‘ಉಜ್ಜಯಿನಿಯಿಲೆ ರಾಪ್ಪಗಲುಗಳ್ (ಉಜ್ಜಯಿನಿಯ ರಾತ್ರಿ ಮತ್ತು ಹಗಲು).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು