ಶುಕ್ರವಾರ, ಮೇ 14, 2021
32 °C
ರಾಜ್ಯ, ಕೇಂದ್ರ, ವಯಸ್ಸು ಯಾವುದನ್ನೂ ಪರಿಗಣಿಸದೇ ‘ಏಕ ರೂಪ‘ ದರ ನಿಗದಿಗೆ ಒತ್ತಾಯ

ಲಸಿಕೆ ದರ ತಾರತಮ್ಯ: ಮಮತಾ ವಾಗ್ದಾಳಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತಾ: ಕೇಂದ್ರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ ಕೊರೊನಾ ಲಸಿಕೆಗೆ ದರ ನಿಗದಿಯಲ್ಲಾಗಿರುವ ‘ಅಸಮಾನತೆ‘ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಲಸಿಕೆಗೆ ಏಕರೂಪ ದರ ನಿಗದಿ‍ಪಡಿಸಬೇಕು‘ ಎಂದು ಒತ್ತಾಯಿಸಿದರು.

‘ಯಾವಾಗಲೂ ಒಂದು ದೇಶ, ಒಂದು ಪಕ್ಷ, ಒಬ್ಬ ನಾಯಕ‘ ಎಂದು ಕೂಗಾಡುವ ಬಿಜೆಪಿ, ದೇಶದ ಜನರ ಜೀವ ಉಳಿಸುವ ಲಸಿಕೆಯ ವಿಚಾರದಲ್ಲಿ ಏಕೆ ಒಂದೇ ಬೆಲೆಯನ್ನು ನಿಗದಿಪಡಿಸುವುದಿಲ್ಲ‘ ಎಂದು  ಮಮತಾ ಪ್ರಶ್ನಿಸಿದ್ದಾರೆ. ಲಸಿಕೆಗೆ ದರ ನಿಗದಿ ವಿಚಾರದಲ್ಲಿ,  ರಾಜ್ಯ, ಕೇಂದ್ರ, ವಯಸ್ಸು ಯಾವುದನ್ನೂ ನೋಡದೇ ಏಕರೂಪ ದರವನ್ನು ನಿಗದಿಪಡಿಸಬೇಕು‘ ಎಂದು ಮಮತಾ ಟ್ವೀಟ್‌ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು