ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿ

Last Updated 17 ಜನವರಿ 2023, 7:50 IST
ಅಕ್ಷರ ಗಾತ್ರ

ಹೋಶಿಯಾರ್‌ಪುರ್‌ (ಪಂಜಾಬ್‌): ಭಾರತ್ ಜೋಡೊ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವ್ಯಕ್ತಿಯೊಬ್ಬರು ಅಪ್ಪಿಕೊಳ್ಳಲು ಯತ್ನಿಸಿದ್ದು, ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು.

ಘಟನಾ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾರೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಭದ್ರತಾ ಉಲ್ಲಂಘನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇಂದು ಬೆಳಗ್ಗೆ ಹೋಶಿಯಾರ್‌ಪುರದ ತಾಂಡಾದಿಂದ ಕಾಂಗ್ರೆಸ್‌ನ ಪಾದಯಾತ್ರೆ ಆರಂಭವಾಯಿತು.

ಭಾರತ್ ಜೋಡೊ ಯಾತ್ರೆ ಜನವರಿ 19ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪಲಿದ್ದು, 30 ರಂದು ಶ್ರೀನಗರದಲ್ಲಿ ಸಮಾರೋಪಗೊಳ್ಳಲಿದೆ.

ಪಾದಯಾತ್ರೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರದ ಆಡಳಿತ ಭರವಸೆ ನೀಡಿದೆ ಎಂದು ಕಾಂಗ್ರೆಸ್‌ ನಾಯಕಿ ರಜನಿ ಪಾಟೀಲ್‌ ತಿಳಿಸಿದ್ದಾರೆ.

ಪಂಜಾಬ್‌ –ಜಮ್ಮು ಗಡಿಯಲ್ಲಿರುವ ಲಖನ್‌ಪುರದಲ್ಲಿ ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಲಾಗುವುದು. ಬಳಿಕ ಕಥುವಾ, ಸಾಂಬಾ ದಾರಿಯಾಗಿ ಜಮ್ಮುವಿನ ಸತ್ವಾರಿ ಚೌಕ್‌ಗೆ ಯಾತ್ರೆ ತೆರಳಲಿದೆ. ಅಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

ಭದ್ರತಾ ಲೋಪ: ಹುಬ್ಬಳ್ಳಿಯಲ್ಲಿ ಮೋದಿಗೆ ಹಾರ ಹಾಕಲು ಯತ್ನಿಸಿದ ಬಾಲಕ
ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಷೋ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ಬ್ಯಾರಿಕೇಡ್‌ ಹಾರಿ ರಸ್ತೆಗೆ ಬಂದಿದ್ದ. ಬಂದೋಬಸ್ತ್‌ನಲ್ಲಿದ್ದ ಸಂಚಾರ ಪೊಲೀಸರು ಮತ್ತು ಮೋದಿ ಅವರ ಭದ್ರತಾ ಸಿಬ್ಬಂದಿ ಅವರಿಂದ ನುಣುಚಿಕೊಂಡು, ಹಾರದೊಂದಿಗೆ ವಾಹನದತ್ತ ಜಿಗಿದಿದ್ದ. ಮೋದಿ ಅವರು ಎಡಗೈನಿಂದ ಹಾರ ಪಡೆದು, ತಮ್ಮ ಸಿಬ್ಬಂದಿಗೆ ಕೊಡುತ್ತಿದ್ದಂತೆ, ಇತರ ಸಿಬ್ಬಂದಿ ಬಾಲಕನನ್ನು ಪಕ್ಕಕ್ಕೆ ತಳ್ಳಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT