ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್ ಕೆಲವಡೆ – ತುರ್ತು ಪರಿಸ್ಥಿತಿ ಘೋಷಣೆ

Last Updated 15 ಮಾರ್ಚ್ 2021, 6:53 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭದ್ರತಾ ಪಡೆಗಳ ದೌರ್ಜನ್ಯದಿಂದಾಗಿ ಹೆಚ್ಚಿನ ಪ್ರತಿಭಟನಾಕಾರರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ, ಮಿಲಿಟರಿ ಆಡಳಿತವು ನಗರದ ಹಲವು ಕಡೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

ಹಿಂಸಾಚಾರದ ಘಟನೆಗಳನ್ನು ಪತ್ತೆ ಹಚ್ಚುವ ಅಸಿಸ್ಟೆನ್ಸ್‌ ಅಸೋಸಿಯನ್ ಫಾರ್‌ ಪೊಲಿಟಿಕಲ್ ಪ್ರಿಸನರ್ಸ್‌ ಎಂಬ ಸಂಸ್ಥೆ, ‘ಭಾನುವಾರ ನಡೆದ ಹಿಂಸಾಚಾರದಲ್ಲಿ 38 ಮಂದಿಯನ್ನು ಕೊಲ್ಲಲಾಗಿದೆ. ಹಲವರು ಗಾಯಗೊಂಡಿದ್ದಾರೆ‘ ಎಂದು ಹೇಳಿದೆ. ಹತ್ಯೆಯಾಗಿರುವವರಲ್ಲಿ 34 ಮಂದಿ ಯಾಂಗೂನ್ ನಗರದವರು. ಈ ಹಿನ್ನೆಲೆಯಲ್ಲಿ ಯಾಂಗೂನ್‌ನ ಲೈನ್ ಟಾ ಯಾ ಮತ್ತು ಶ್ವೇಪ್ಯಿತಾ ಉಪನಗರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಲೈನ್ ಟಾ ಯಾ ಉಪನಗರದಿಂದ ದೊರೆತ ವಿಡಿಯೊದಲ್ಲಿ, ಗುಂಡು ಹಾರಿಸಿದ ನಂತರ ಜನರು ಓಡುತ್ತಿರುವ ದೃಶ್ಯವಿದೆ. ಇಂಡಿಪೆಂಡೆಂಟ್ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ ಬಿಡುಗಡೆ ಮಾಡಿರುವ ದೃಶ್ಯದ ತುಣುಕುಗಳಲ್ಲಿ, ತಪ್ಪಿಸಿಕೊಂಡು ಓಡುತ್ತಿರುವ ಒಬ್ಬ ವ್ಯಕ್ತಿ ಗಾಯಗೊಂಡವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT