ಬುಧವಾರ, ಜನವರಿ 19, 2022
26 °C

ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಸೇನಾಧಿಕಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತೀಯ ಸೇನೆಯ ಹುತಾತ್ಮ ಯೋಧ ನಾಯಕ್‌ ದೀಪಕ್‌ ಕುಮಾರ್‌ ಅವರ ಪತ್ನಿ ಜ್ಯೋತಿ ದೀಪಕ್‌ ನೈನ್ವಲ್‌ ಅವರು ಚೆನ್ನೈನ ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ.

ಡೆಹ್ರಾಡೂನ್‌ನ ಗೃಹಿಣಿ ಜ್ಯೋತಿ ಅವರ ಪತಿ 2018ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.

ಜ್ಯೋತಿ ಅವರಿಗೆ 9 ವರ್ಷದ ಮಗಳು ಹಾಗೂ 7 ವರ್ಷದ ಮಗ ಇದ್ದಾರೆ. ಪತಿಯ ಮರಣದ ನಂತರ ಮಕ್ಕಳ ಪೋಷಣೆಯಲ್ಲೇ ಮುಳುಗಿದ್ದ ಜ್ಯೋತಿ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸುವಂತಹ ಛಲವನ್ನು ತುಂಬಿದವರು ಅವರ ತಾಯಿ.

ತಾಯಿಯ ಪ್ರೇರಣೆಯಿಂದ ಸೇನೆಗೆ ಸೇರಬೇಕೆಂಬ ಹಂಬಲ ಮೂಡಿತು ಎಂದಿದ್ದಾರೆ 33 ವರ್ಷದ ಜ್ಯೋತಿ.

‘ಬ್ರಿಗೇಡಿಯರ್‌ ಚೀಮಾ ಮತ್ತು ಕರ್ನಲ್‌ ಎಂ.ಪಿ. ಸಿಂಗ್‌ ಅವರ ಮಾರ್ಗದರ್ಶನದಿಂದ ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ ಪರೀಕ್ಷೆಗೆ ತಯಾರಿ ನಡೆಸಿದ್ದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು