ಮಂಗಳವಾರ, ಡಿಸೆಂಬರ್ 7, 2021
23 °C

ಮಾನಹಾನಿ ಹೇಳಿಕೆ: ₹10 ಕೋಟಿ ಪರಿಹಾರ ಕೋರಿ ಸತ್ಯಪಾಲ್‌ಗೆ ಮೆಹಬೂಬಾ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ತಮ್ಮ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಮಾನಹಾನಿ ಪ್ರಕರಣದಡಿ ₹10 ಕೋಟಿ ಪರಿಹಾರ ಕೋರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶುಕ್ರವಾರ ಜಮ್ಮು–ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಗೆ ಕಾನೂನು ನೋಟಿಸ್‌ ಕಳುಹಿಸಿದ್ದಾರೆ. 

ಮೆಹಬೂಬಾ ಅವರು ಈಗ ಕೈಬಿಟ್ಟಿರುವ ರಾಜ್ಯದ ಜನರಿಗೆ ಶುಲ್ಕದ ಆಧಾರದಲ್ಲಿ ಭೂ ಸ್ವಾಮ್ಯದ ಹಕ್ಕುಗಳನ್ನು ನೀಡುವ ರೋಶ್ನಿ ಯೋಜನೆಯ ಫಲಾನುಭವಿ ಎಂದು ಮಲಿಕ್‌ ಆರೋಪ ಮಾಡಿದ ನಂತರದಲ್ಲಿ ಈ ನೋಟಿಸ್‌ ನೀಡಲಾಗಿದೆ. 

‘ನಿಮ್ಮ ಹೇಳಿಕೆಯಿಂದ ನಮ್ಮ ಕಕ್ಷಿದಾರರು ಕಳೆದುಕೊಂಡಿರುವ ಸಮಾಜದಲ್ಲಿನ ಸ್ಥಾನಮಾನ ಮತ್ತು ಗಳಿಸಿರುವ ಉತ್ತಮ ಹೆಸರನ್ನು ಯಾವ ಮೊತ್ತದ ಹಣವೂ ತುಂಬಿಕೊಡಲು ಸಾಧ್ಯವಿಲ್ಲ. ಆದರೂ ಅವರು ತಮ್ಮ ಮಾನಹಾನಿಗೆ ಪರಿಹಾರವಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ’ ಎಂದು ಮೆಹಬೂಬಾ ಅವರ ಪರ ವಕೀಲ ಅನಿಲ್‌ ಸೇಥಿ ನೋಟಿಸ್‌ನಲ್ಲಿ ಹೇಳಿದ್ದಾರೆ. 

30 ದಿನಗಳ ಒಳಗೆ ಮಲಿಕ್‌ ₹ 10 ಕೋಟಿ ಪಾವತಿಸಬೇಕು ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕು ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು