ಶನಿವಾರ, ಜೂನ್ 25, 2022
28 °C
ಚೋಕ್ಸಿ ಕರೆತರಲು ಕೆರಿಬಿಯನ್ ದ್ವೀಪರಾಷ್ಟ್ರಕ್ಕೆ ಖಾಸಗಿ ವಿಮಾನ ಕಳುಹಿಸಿದ ಭಾರತ

ಡೊಮಿನಿಕಾದಲ್ಲೇ ಉಳಿದ ಚೋಕ್ಸಿ, ಭಾರತೀಯ ತಂಡ ವಾಪಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಹುಕೋಟಿ ಹಗರಣದ ಆರೋಪಿ ವಜ್ರ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಕರೆತರಲು ಭಾರತ ಸರ್ಕಾರ ಕೆರಿಬಿಯನ್‌ ರಾಷ್ಟ್ರಕ್ಕೆ ಕಳುಹಿಸಿದ್ದ ಕತಾರ್‌ ಏರ್‌ವೇಸ್‌ನ ಖಾಸಗಿ ವಿಮಾನ ಏಳು ದಿನಗಳ ನಂತರ ಭಾರತದತ್ತ ಹೊರಟಿದೆ.

ಡೊಮಿನಿಕಾ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು, ಇನ್ನು ಕನಿಷ್ಠ 1 ತಿಂಗಳ ಕಾಲ ಚೋಕ್ಸಿ ಡೊಮಿನಿಕಾದಲ್ಲೇ ಉಳಿಯಬೇಕಾಗಿ ಬರಲಿದೆ. ಈ ಹಿನ್ನೆಲೆಯಲ್ಲಿ ಚೋಕ್ಸಿ ಕರೆತರಲು ತೆರಳಿದ್ದ ಭಾರತದ ತನಿಖಾ ಅಧಿಕಾರಿಗಳು ಇದೀಗ ಬರಿಗೈಯಲ್ಲಿ ದೇಶಕ್ಕೆ ವಾಪಸಾಗುವಂತಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 13,500 ಕೋಟಿ ವಂಚಿಸಿ ಪರಾರಿಯಾಗಿರುವ ಚೋಕ್ಸಿಯನ್ನು ಕರೆತರಲು ಸಿಬಿಐ ಡಿಐಜಿ ಶ್ರದ್ಧಾ ರಾವುತ್‌ ನೇತೃತ್ವದ ಅಧಿಕಾರಿಗಳ ತಂಡ ಡೊಮಿನಿಕಾಗೆ ತೆರಳಿತ್ತು ಹಾಗೂ ಏಳು ದಿನ ಅಲ್ಲೇ ಕಾದು ಕುಳಿತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು