ಭಾನುವಾರ, ಏಪ್ರಿಲ್ 2, 2023
33 °C

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಇಟಾನಗರ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಟುಟಿಂಗ್ ಪಟ್ಟಣದ ಸಮೀಪ ಬೆಳಿಗ್ಗೆ 10.43ರ ಸುಮಾರಿಗೆ ವಾಯುಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್(ಎಎಲ್‌ಎಚ್) ಪತನಗೊಂಡಿದೆ.

ಐವರು ಸೇನಾ ಅಧಿಕಾರಿಗಳನ್ನೊಳಗೊಂಡ ಹೆಲಿಕಾಪ್ಟರ್, ಸಿಯಾಂಗ್ ಜಿಲ್ಲೆಯ ಕೆಳಪ್ರದೇಶದ ಲಿಕಬಾಲಿಯಿಂದ ಟೇಕಾಫ್ ಆಗಿತ್ತು. ದಿನನಿತ್ಯದ ಕಣ್ಗಾವಲಿಗಾಗಿ ಹೆಲಿಕಾಪ್ಟರ್ ಹೊರಟಿತ್ತು. ಆದರೆ, ಟುಟಿಂಗ್‌ನಿಂದ 25 ಕಿ.ಮೀ ದೂರದ ಮಿಗ್ಗಿಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ.

ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಸೇನೆಯ ಇತರೆ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ರಸ್ತೆ ಸಂಪರ್ಕವಿಲ್ಲದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ದುರ್ಗಮ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೆರಳಿರುವ ಸೇನೆಯ ಮತ್ತೊಂದು ಹೆಲಿಕಾಪ್ಟರ್ ಅಲ್ಲಿ ಇಳಿದಿಲ್ಲ. ಸ್ಥಳೀಯ ಜನರಿಂದ ಸಹಾಯ ಕೋರಲಾಗಿದೆ.

ಅರುಣಾಚಲಪ್ರದೇಶವು ಚೀನಾ ಮತ್ತು ಮ್ಯಾನ್ಮಾರ್ ಜೊತೆ ಗಡಿ ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು