ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಬಾಬರಿ ಮಸೀದಿಯಷ್ಟೇ ಬೃಹತ್ ಮಸೀದಿ ನಿರ್ಮಾಣ ಚಿಂತನೆ

Last Updated 5 ಸೆಪ್ಟೆಂಬರ್ 2020, 10:38 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಬಾಬರಿ ಮಸೀದಿಯಷ್ಟೇ ಬೃಹತ್ತಾಗಿ ಇರಲಿದೆ ಎಂದು ಮಸೀದಿ ನಿರ್ಮಾಣ ಕುರಿತು ರಚನೆಯಾಗಿರುವ ಟ್ರಸ್ಟ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ರಾಮಜನ್ಮಭೂಮಿ ವಿವಾದ ಕುರಿತ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಮಸೀದಿ ನಿರ್ಮಾಣಕ್ಕೂ ಅಯೋಧ್ಯೆಯಲ್ಲಿ ಭೂಮಿ ಮಂಜೂರು ಮಾಡಲು ಆದೇಶಿಸಿತ್ತು. ಅದರಂತೆ, ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯ ಧನ್ನಿಪುರದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

ಇಲ್ಲಿ ನಿರ್ಮಾಣವಾಗಲಿರುವ ಸಂಕೀರ್ಣದಲ್ಲಿ ಆಸ್ಪತ್ರೆ, ಗ್ರಂಥಾಲಯ ಇರುತ್ತದೆ. ಜತಗೆ ಇಂಡೊ-ಇಸ್ಲಾಮಿಕ್ ಸಂಶೋಧನಾ ಕೇಂದ್ರವನ್ನೂ ಒಳಗೊಂಡಿರಲಿದೆ. ನಿವೃತ್ತ ಪ್ರಾಧ್ಯಾಪಕ ಮತ್ತು ಆಹಾರ ವಿಮರ್ಶಕ ಪುಷ್ಪೇಶ್ ಪಂತ್ ಅವರು ಕಟ್ಟಡ ನಿರ್ಮಾಣ ಸಲಹೆಗಾರರಾಗಿರುತ್ತಾರೆ ಎಂದು ಆ ಸದಸ್ಯರು ವಿವರಿಸಿದ್ದಾರೆ.

ಮಸೀದಿ ಸಂಕೀರ್ಣದ ನಿರ್ಮಾಣ ವಿಸ್ತೀರ್ಣ ಒಟ್ಟು 15,000 ಚದರ ಅಡಿ ಆಗಿರುತ್ತದೆ. ಐದು ಎಕರೆ ಭೂಮಿಯ ಉಳಿದ ಪ್ರದೇಶವನ್ನು ಉದ್ದೇಶಿತ ಅನ್ಯ ಸೌಲಭ್ಯಗಳಿಗೆ ಬಳಸಲಾಗುವುದು ಎಂದು ಇಂಡೊ ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನದ (ಐಐಸಿಎಫ್) ವಕ್ತಾರ ಮತ್ತು ಕಾರ್ಯದರ್ಶಿ ಅಥರ್ ಹುಸೇನ್ ಶನಿವಾರ ತಿಳಿಸಿದರು.

ಪುಷ್ಫೇಶ್ ಅವರು ಸಲಹೆಗಾರರಾಲು ಸಮ್ಮತಿಸಿದ್ದಾರೆ. ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯು ನಿರ್ಮಾಣ ಉದ್ದೇಶಗಳಿಗಾಗಿ ಐಐಸಿಎಫ್ ಟ್ರಸ್ಟ್ ಅನ್ನು ರಚಿಸಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಪ್ರಾಧ್ಯಾಪಕ ಎಸ್.ಎಂ.ಅಖ್ತರ್ ಅವರು ವಾಸ್ತುಶಿಲ್ಪ ಸಲಹೆಗಾರರಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT