ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಂಟ್‌ ಮನಸ್ಲು ವಿಶ್ವದ 8ನೇ ಅತಿ ಎತ್ತರದ ಶಿಖರ; ಐಟಿಬಿಪಿ ಅಧಿಕಾರಿಗಳಿಂದ ಅಳತೆ

Last Updated 27 ಸೆಪ್ಟೆಂಬರ್ 2021, 12:22 IST
ಅಕ್ಷರ ಗಾತ್ರ

ಪಿಥೋರಗಡ (ಉತ್ತರಾಖಂಡ): ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ ಇಬ್ಬರು ಅಧಿಕಾರಿಗಳು ನೇಪಾಳದಲ್ಲಿನ ಮೌಂಟ್‌ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. ಇದು ಪ್ರಪಂಚದ ಎಂಟನೇ ಅತಿ ಎತ್ತರದ ಶಿಖರವಾಗಿದೆ.

ಐಟಿಬಿಪಿಯ ಕಮಾಂಡೆಂಟ್‌ ರತನ್‌ ಸಿಂಗ್‌ ಸೋನಲ್‌ ಅವರು ಈ ಯೋಜನೆಯ ನೇತೃತ್ವ ವಹಿಸಿದ್ದರು. ಅವರೊಂದಿಗೆ ಉಪ ಕಮಾಂಡೆಂಟ್‌ ಅನೂಪ್‌ ನೇಗಿ ಇದ್ದರು ಎಂದು ಐಟಿಬಿಪಿ ಡಿಐಜಿ ಎಪಿಎಸ್‌ ನಿಂಬಾಡಿಯಾ ಹೇಳಿದ್ದಾರೆ.

ಸೆಪ್ಟೆಂಬರ್‌ 7 ರಂದು ಶಿಖರ ಏರಲು ಆರಂಭಿಸಿದ್ದಇಬ್ಬರು ಅಧಿಕಾರಿಗಳು, ಸೆಪ್ಟೆಂಬರ್‌ 25ರಂದು ಶಿಖರದ ಎತ್ತರದ ಅಳತೆ ಪೂರ್ಣಗೊಳಿಸಿದ್ದಾರೆ.ಮನಸ್ಲು ಪರ್ವತವು 8,163 ಮೀಟರ್ ಎತ್ತರವಿದೆ ಎಂದು ಮಾಹಿತಿ ನೀಡಿದ್ದಾರೆ.

ಸೋನಲ್‌ ಅವರು ಮೌಂಟ್‌ ಎವರೆಸ್ಟ್‌, ನಂದಾದೇವಿ ಈಸ್ಟ್‌, ಸತೋಪಂಥ್‌ ಮತ್ತು ಮುಕುಟ್‌ ಸೇರಿದಂತೆ ಹಲವು ಶಿಖರಗಳನ್ನು ಏರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT