ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಟಿಟಿ ಫ್ಲಾಟ್‌ಫಾರಂಗೆ ಸೆನ್ಸಾರ್: ಕೇಂದ್ರ ಸರ್ಕಾರ ಚಿಂತನೆ

Last Updated 24 ಜನವರಿ 2021, 16:50 IST
ಅಕ್ಷರ ಗಾತ್ರ

ಭೋಪಾಲ್: ‘ಓವರ್ ದ ಟಾಪ್ (ಓಟಿಟಿ) ಫ್ಲಾಟ್‌ಫಾರಂಗಳಲ್ಲಿ ಪ್ರಸಾರವಾಗುತ್ತಿರುವ ವೆಬ್‌ಸರಣಿಗಳಲ್ಲಿ ಅಶ್ಲೀಲ ವಿಷಯಗಳಿದ್ದು ಅವುಗಳನ್ನು ಸೆನ್ಸಾರ್ ಮಾಡುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಹೇಳಿದ್ದಾರೆ.

‘ಬೇಟಿ ಬಚಾವೊ, ಬೇಟಿ ಪಢಾವೋ’ ಅಭಿಯಾನದ ಭಾಗವಾದ ‘ಪಂಖ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಓಟಿಟಿಯ ಅಶ್ಲೀಲ ವಿಷಯಗಳು ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್‌ಗಳಲ್ಲಿ ಪ್ರಸಾರವಾಗುತ್ತಿದ್ದು, ಇದರಿಂದ ಹದಿಹರೆಯದವರೂ ಪ್ರಭಾವಕ್ಕೊಳಗಾಗುತ್ತಿದ್ದಾರೆ. ಓಟಿಟಿಯಲ್ಲಿ ಇಂಥ ದೃಶ್ಯಗಳನ್ನು ವೀಕ್ಷಿಸಿದ್ದ 12ರ ಹರೆಯದ ಬಾಲಕನೊಬ್ಬ 6 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಘಟನೆ ಈಚೆಗಷ್ಟೇ ನಡೆದಿದೆ’ ಎಂದರು.

‘ಯುವ ಮನಸ್ಸುಗಳು ಓಟಿಟಿಯಲ್ಲಿ ಪ್ರಸಾರವಾಗುವಂಥ ದೃಶ್ಯಾವಳಿಗೆ ಬಹುಬೇಗನೇ ಪ್ರಭಾವಕ್ಕೊಳಗಾಗುತ್ತವೆ. ಅಂಥ ವಿಷಯವನ್ನು ಸೆನ್ಸಾರ್ ಮಾಡುವುದು ಸೂಕ್ತ. ಈ ವಿಷಯವನ್ನು ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT