ಸೋಮವಾರ, ಜೂನ್ 27, 2022
21 °C

ಮುಂಬೈ: ಮನೆ ಮೇಲೆ ಕಟ್ಟಡದ ಗೋಡೆ ಕುಸಿತ: ಒಬ್ಬರ ಸಾವು, 17 ಮಂದಿಯ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಾಂದ್ರಾದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಗೋಡೆಯು ಪಕ್ಕದ ಎರಡು ಅಂತಸ್ತಿನ ಮನೆಯ ಮೇಲೆ ಕುಸಿದಿರುವ ಪರಿಣಾಮ ಸಂಭವಿಸಿರುವ ದುರಂತದಲ್ಲಿ ಓರ್ವ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂದ್ರಾ (ಪೂರ್ವ) ಖೇರ್ವಾಡಿ ರಸ್ತೆಯಲ್ಲಿರುವ ರಜಾಕ್ ಚಾವ್ಲ್‌ನಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದೆ. 28 ವರ್ಷದ ರಿಯಾಸ್ ಅಹ್ಮದ್ ಎಂಬವರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

 

 

 

ಅವಘಡ ಸಂಭವಿಸಿದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ 11 ಮಂದಿಯನ್ನು ರಕ್ಷಿಸಿದ್ದಾರೆ. ಸ್ಥಳೀಯರು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಆರು ಮಂದಿಯ ಜೀವವನ್ನು ಉಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 

 

ಗಾಯಗೊಂಡವರನ್ನು ಸಲ್ಮಾನ್ ಖಾನ್ (24), ರಾಹುಲ್ ಕೋತ್ (22), ರೋಹಿತ್ ಕೋತ್ (22) ಹಾಗೂ ಲತಾ ಕೋತ್ (48) ಎಂದು ಗುರುತಿಸಲಾಗಿದ್ದು, ಬಾಂದ್ರಾದ ಬಾಬಾ ಆಸ್ಪತ್ರೆ ಹಾಗೂ ಸಾಂಟಾಕ್ರೂಜ್‌ನ ವಿ.ಎನ್. ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರು ಚೇತರಿಸಿಕೊಳ್ಳುತ್ತಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು