ಗುರುವಾರ , ಡಿಸೆಂಬರ್ 3, 2020
23 °C
ಸಂಸ್ಕೃತಿ ಸಚಿವಾಲಯದಿಂದ ಘೋಷಣೆ

ವಸ್ತುಸಂಗ್ರಹಾಲಯ, ಕಲಾ ಗ್ಯಾಲರಿಗಳು ನ.10ರಿಂದ ಪ್ರವೇಶಕ್ಕೆ ಮುಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ವಸ್ತು ಸಂಗ್ರಹಾಲಯಗಳು, ಕಲಾ ಗ್ಯಾಲರಿಗಳು ಹಾಗೂ ವಸ್ತುಪ್ರದರ್ಶನ ಮಳಿಗೆಗಳು ನ.10ರಿಂದ ಪುನರಾರಂಭಗೊಳ್ಳಲಿವೆ ಎಂದು ಸಚಿವಾಲಯವು ಗುರುವಾರ ಘೋಷಿಸಿದೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಪುನರಾರಂಭಕ್ಕಿರುವ ಮಾರ್ಗಸೂಚಿಗಳನ್ನು ಸಚಿವಾಲಯವು ಪ್ರಕಟಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಅನ್‌ಲಾಕ್‌ ಮಾರ್ಗಸೂಚಿಗಳ ಅನ್ವಯ, ಆಯಾ ರಾಜ್ಯದಲ್ಲಿರುವ ನಿಯಮಗಳಿಗೆ ಅನುಸಾರವಾಗಿ ವಸ್ತುಸಂಗ್ರಹಾಲಯಗಳನ್ನು ಪುನರಾರಂಭಿಸಬಹುದು. ವಸ್ತು ಸಂಗ್ರಹಾಲಯದ ಇರುವ ಪ್ರದೇಶವನ್ನು ಆಗಾಗೆ ಸೋಂಕು ನಿರೋಧಕದಿಂದ ಸ್ವಚ್ಛಗೊಳಿಸಬೇಕು, ಪ್ರವೇಶಕ್ಕೆ ಮುಖಗವಸು ಕಡ್ಡಾಯಗೊಳಿಸಬೇಕು, ಪ್ರವಾಸಿಗರಿಗೆ ಆಡಿಯೊ ಗೈಡ್‌ (ಪ್ರದೇಶ, ವಸ್ತುವಿನ ವಿವರಣೆ ಇರುವ ಉಪಕರಣ) ನೀಡಬಾರದು. ಆಡಿಯೊ ಗೈಡ್‌ಗಳನ್ನು ಪ್ರತಿ ಬಳಕೆಯ ನಂತರ ಸೋಂಕು ನಿರೋಧಕಗಳಿಂದ ಸ್ವಚ್ಛಗೊಳಿಸಿದ್ದರೆ ಮಾತ್ರವೇ ಇನ್ನೊಬ್ಬರಿಗೆ ನೀಡಬಹುದು. ಟಚ್‌ ಆಧಾರಿತ ಡಿಜಿಟಲ್‌ ಉಪಕರಣಗಳ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.