ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ: ಪ್ರಧಾನಿ ಮೋದಿ ಘೋಷಣೆ

Last Updated 25 ಡಿಸೆಂಬರ್ 2021, 17:53 IST
ಅಕ್ಷರ ಗಾತ್ರ

ನವದೆಹಲಿ: ದೇಶದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದರು. ದೇಶದ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದೂ ಅವರು ಪ್ರಕಟಿಸಿದರು.

ಶಾಲಾ ಕಾಲೇಜಿಗೆ ತೆರಳಿ, 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲಾಗುವುದು ಎಂದು ಅವರು ತಿಳಿಸಿದರು. ಶನಿವಾರ ರಾತ್ರಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಗಂಭೀರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟ ವರಿಗೆ ಮುಂಜಾಗ್ರತಾ ಕ್ರಮವಾಗಿ ಈ ಬೂಸ್ಟರ್ ಡೋಸ್‌ ಲಸಿಕೆ ನೀಡ ಲಾಗುತ್ತದೆ ಎಂದರು.

ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಬಗ್ಗೆ ಆತಂಕ ಬೇಡ, ನಿಯಮಾವಳಿಗಳನ್ನು ಪಾಲಿಸಿ ಎಂದು ಅವರು ಜನರಿಗೆ ಕರೆ ನೀಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಮತ್ತು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಮೋದಿ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.

ರಾಜ್ಯಗಳಿಗೆ ಕೇಂದ್ರ ತಂಡ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ, ಕರ್ನಾಟಕ ಸೇರಿದಂತೆ 10 ರಾಜ್ಯಗಳಿಗೆ ಕೇಂದ್ರದ ತಾಂತ್ರಿಕ ತಂಡಗಳನ್ನುನಿಯೋಜಿಸಲಾಗಿದೆ.ಪ್ರತಿ ತಂಡದಲ್ಲಿ ವೈದ್ಯರು ಅಥವಾ ಐಸಿ ಎಂಆರ್ ವಿಜ್ಞಾನಿಗಳನ್ನು ಒಳಗೊಂಡ ನಾಲ್ವರು ಸದಸ್ಯರು ಇರಲಿದ್ದಾರೆ. ಸೋಂಕಿತರ ಪ್ರಮಾಣ ಏರಿಕೆ ಕಾಣುತ್ತಿರುವ ರಾಜ್ಯಗಳು ಅಥವಾ ಲಸಿಕೆ ಅಭಿಯಾನದಲ್ಲಿ ಹಿಂದೆ ಉಳಿದಿ ರುವ ರಾಜ್ಯಗಳನ್ನು ಗುರುತಿಸಿ, ವಿಭಿನ್ನ ಅಧ್ಯಯನ ವಿಷಯಗಳನ್ನು ನಿರ್ವ ಹಿಸುವ ಕೇಂದ್ರದ ತಂಡಗಳನ್ನು ಅಲ್ಲಿಗೆ ಕಳುಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ವಿಜೋರಾಂ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಂಜಾಬ್‌ರಾಜ್ಯಗಳಲ್ಲಿ ಈ ತಂಡ ಗಳುಆಯಾ ರಾಜ್ಯಗಳ ಆರೋಗ್ಯ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವ ಹಿಸಲಿವೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಹಾಗೂ ಲಸಿಕೆ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಈ ತಂಡಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿವೆ. ಸಂಪರ್ಕಿತರನ್ನುಪತ್ತೆ ಹಚ್ಚುವಿಕೆ, ಸೋಂಕಿತರ ಮಾದರಿಗಳ ಪರೀಕ್ಷೆ, ಕಂಟೇನ್ಮೆಂಟ್ ವಲಯಗಳ ನಿರ್ವಹಣೆ ಹಾಗೂಕ್ಲಸ್ಟರ್‌ಗಳಿಂದ ಸಂಗ್ರಹಿಸಿದ ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗಾಗಿ ಐಎನ್‌ಎಸ್‌ಎಸಿಒಜಿ ಜಾಲಕ್ಕೆ ಕಳುಹಿಸಿಕೊಡುವುದೂ ಸೇರಿ ವಿವಿಧ ವಿಷಯಗಳ ಬಗ್ಗೆ ಈ ತಂಡ ಗಳು ಮಾರ್ಗದರ್ಶನ ನೀಡಲಿವೆ.

ದೇಶದಲ್ಲಿ 452ಕ್ಕೇರಿದ ಪ್ರಕರಣಗಳು

ನವದೆಹಲಿ: ದೇಶದಲ್ಲಿ ಕೋವಿಡ್‌ ರೂಪಾಂತರ ತಳಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 400ರ ಗಡಿ ದಾಟಿದೆ. ಈವರೆಗೆಒಟ್ಟು 452 ಓಮೈಕ್ರಾನ್‌ ಪ್ರಕರಣಗಳು ವರದಿಯಾಗಿವೆ. ಶನಿವಾರ ರಾಜಸ್ಥಾನದಲ್ಲಿ 21, ಕೇರಳದಲ್ಲಿ 1, ಕರ್ನಾಟಕದಲ್ಲಿ 7, ಮಹಾರಾಷ್ಟ್ರದಲ್ಲಿ 2 ಪ್ರಕರಣಗಳು ಕಂಡುಬಂದಿವೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು (110) ಓಮೈಕ್ರಾನ್‌ ಸೋಂಕಿತರು ಕಂಡುಬಂದಿದ್ದಾರೆ. ಇದುವರೆಗೆ ದೆಹಲಿಯಲ್ಲಿ 79, ಗುಜರಾತ್‌ನಲ್ಲಿ 49,
ರಾಜಸ್ಥಾನದಲ್ಲಿ 43, ತೆಲಂಗಾಣದಲ್ಲಿ 38, ಕೇರಳದಲ್ಲಿ 38, ತಮಿಳುನಾಡಿನಲ್ಲಿ 34 ಮತ್ತು ಕರ್ನಾಟಕದಲ್ಲಿ 38 ಓಮೈಕ್ರಾನ್‌ ಪ್ರಕರಣ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT