ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಸಲ್ ಕೋವಿಡ್‌ ಲಸಿಕೆ ಮಕ್ಕಳಿಗೆ ನೀಡೋದು ಸುಲಭ: ಏಮ್ಸ್‌ ನಿರ್ದೇಶಕ ಗುಲೇರಿಯಾ

Last Updated 20 ಜನವರಿ 2021, 11:52 IST
ಅಕ್ಷರ ಗಾತ್ರ

ನವದೆಹಲಿ: ‘ನೇಸಲ್ ಕೋವಿಡ್‌–19‌ ಲಸಿಕೆಯನ್ನು ಶಾಲಾ ಮಕ್ಕಳಿಗೆ ಸುಲಭವಾಗಿ ನೀಡಬಹುದು’ ಎಂದು ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯಾ ಬುಧವಾರ ತಿಳಿಸಿದ್ದಾರೆ.

16ನೇ ಆವೃತ್ತಿಯ ರೈಸಿಂಗ್‌ ಡೇ ಸಮಾರಂಭದಲ್ಲಿ ಪಾಲ್ಗೊಂಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಅವರು ‘ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರು ನಾಲ್ಕು ಇಲ್ಲವೇ ಆರು ವಾರಗಳ ಬಳಿಕ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು’ ಎಂದರು.

‘ಮಕ್ಕಳಿಗೆ ತಗುಲುವ ಸೋಂಕು ತೀವ್ರ ಸ್ವರೂಪದ್ದಾಗಿರುವುದಿಲ್ಲ. ಹಾಗಂತ ನಿರ್ಲಕ್ಷಿಸಬಾರದು. ಅವರಿಂದ ಉಳಿದವರಿಗೂ ಸೋಂಕು ಪಸರಿಸುವ ಅಪಾಯ ಹೆಚ್ಚಿರುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಈಗ ತಯಾರಿಸಲ್ಪಟ್ಟಿರುವ ಲಸಿಕೆಗಳನ್ನು ಮಕ್ಕಳಿಗೆ ನೀಡಬೇಕೊ, ಬೇಡವೊ ಎಂಬುದರ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಮಕ್ಕಳಿಗೆ ನೀಡಬಹುದಾದ ಕೋವಿಡ್‌ ಲಸಿಕೆ ಶೀಘ್ರವೇ ಬರಬಹುದು. ಭಾರತ್‌ ಬಯೋಟೆಕ್‌ ಸಂಸ್ಥೆಯು ನೇಸಲ್‌ ಲಸಿಕೆಗೆ (ಮೂಗಿನ ಮೂಲಕ ನೀಡುವ ಲಸಿಕೆ) ಅನುಮೋದನೆ ಪಡೆಯಲು ಮುಂದಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT