ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೂರು ಗಂಟೆ ಇ.ಡಿ ವಿಚಾರಣೆ ಎದುರಿಸಿದ ಸೋನಿಯಾ

ಅಕ್ಷರ ಗಾತ್ರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಮೂರನೇ ದಿನವಾದ ಬುಧವಾರವೂ ವಿಚಾರಣೆಗೆ ಒಳಪಡಿಸಿತು. ಸೋನಿಯಾ ಅವರನ್ನು ಮೂರು ತಾಸು ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಸೋನಿಯಾ ಗಾಂಧಿ ಅವರಿಗೆ ಇ.ಡಿ ಯಾವುದೇ ಹೊಸ ಸಮನ್ಸ್ ಜಾರಿಗೊಳಿಸಿಲ್ಲ. ಅಗತ್ಯವಿದ್ದಲ್ಲಿ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಗಾಂಧಿ ಅವರ ಜತೆ ಬೆಳಿಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ಬಂದ ಸೋನಿಯಾ ಅವರು, ಅಧಿಕಾರಿಗಳ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಸೋನಿಯಾ ಅವರಿಗೆ ಆಗಾಗ್ಗೆ ಔಷಧ ಹಾಗೂ ಮಾತ್ರೆಗಳನ್ನು ನೀಡಬೇಕಿದ್ದರಿಂದ, ಪ್ರಿಯಾಂಕಾ ಅವರು ಇ.ಡಿ. ಕಚೇರಿಯ ಮತ್ತೊಂದು ಕೋಣೆಯಲ್ಲಿ ಇದ್ದರು.

ಸೋನಿಯಾ ಗಾಂಧಿ ಅವರು ಜುಲೈ 26ರಂದು (ಮಂಗಳವಾರ) ಆರು ತಾಸು ಹಾಗೂ ಜುಲೈ 21ರಂದು ಎರಡೂವರೆ ಗಂಟೆ ವಿಚಾರಣೆ ಎದುರಿಸಿದ್ದರು.

ಇ.ಡಿ ಅಧಿಕಾರಿಗಳು ಕೇಳಿದ್ದ 28 ಪ್ರಶ್ನೆಗಳಿಗೆ ಉತ್ತರಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಾಗೂ ಯಂಗ್ ಇಂಡಿಯಾ ಕಂಪನಿಯಲ್ಲಿನ ಪಾತ್ರದ ಕುರಿತು ಸೋನಿಯಾ ಅವರನ್ನು ಪ್ರಶ್ನಿಸಲಾಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT