ಮಂಗಳವಾರ, ಮಾರ್ಚ್ 28, 2023
22 °C

ಆರ್ಯನ್‌ ಖಾನ್‌ ಅಪಹರಣಕ್ಕೆ ಸಂಚು: ಸಮೀರ್‌ ವಾಂಖೆಡೆ ವಿರುದ್ಧ ಸಚಿವ ಮಲಿಕ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಎನ್‌ಸಿಬಿ ಮುಂಬೈ ವಲಯದ ನಿರ್ದೇಶಕ ಸಮೀರ್‌ ವಾಂಖೆಡೆ ಅವರು ಬಾಲಿವುಡ್‌ ನಟ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ರನ್ನು ಅಪಹರಿಸುವ ಸಂಚೊಂದರ ಭಾಗವಾಗಿದ್ದರು ಎಂದು ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಭಾನುವಾರ ಆರೋಪಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಮೋಹಿತ್‌ ಭಾರತೀಯ ಅವರು ಈ ಸಂಚಿನ ಸೂತ್ರದಾರ ಆಗಿದ್ದರು ಎಂದು ಹೇಳಿದರು. 

ವಾಂಖೆಡೆ ಅವರು ಓಶಿವಾರಾ ಉಪನಗರದ ಸ್ಮಶಾನವೊಂದರಲ್ಲಿ ಭಾರತೀಯ ಅವರು ಭೇಟಿಯಾಗಿದ್ದರು ಎಂದು ಮಲಿಕ್‌ ಹೇಳಿದರು.

ಕಳೆದ ತಿಂಗಳು ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್‌ ವಶಪಡಿಸಿಕೊಂಡಿತ್ತು. ಈ ವೇಳೆ ಅಲ್ಲಿದ್ದ ಆರ್ಯನ್‌ ಖಾನ್‌ ಅವರನ್ನು ಬಂಧಿಸಲಾಗಿತ್ತು.

ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣವು ನಕಲಿಯಾದುದು ಎಂದು ಪುನರುಚ್ಚರಿಸಿದ ಮಲಿಕ್‌ ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು