ರಾಜಾ ರಾಮ್ ಮೋಹನ್ ರಾಯ್ ಪುತ್ಥಳಿ ಅನಾವರಣ

ಕೋಲ್ಕತ್ತ (ಪಿಟಿಐ): ಸಮಾಜ ಸುಧಾರಕ, ಬಂಗಾಳದ ನವೋದಯ ಪಿತಾಮಹ ರಾಜಾರಾಮ್ ಮೋಹನ್ ರಾಯ್ ಅವರ 250ನೇ ಜನ್ಮದಿನದ ಅಂಗವಾಗಿ ಕೇಂದ್ರ ಸಾಂಸ್ಕೃತಿಕ ಸಚಿವ ಜಿ. ಕಿಶನ್ ರೆಡ್ಡಿ ಅವರು ಕೋಲ್ಕತ್ತದ ಉಪ್ಪಿನ ಸರೋವರದಲ್ಲಿ ಮೋಹನ್ ರಾಯ್ ಅವರ ಪುತ್ಥಳಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು.
ಕೋಲ್ಕತ್ತದ ಸೈನ್ಸ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವ ರೆಡ್ಡಿ, ‘ರಾಜಾ ರಾಮ್ ಮೋಹನ್ ರಾಯ್ ಅವರು ಸತಿ ಅಥವಾ ಸತಿ ಸಹಗಮನದಂತಹ ಪದ್ಧತಿಯ ನಿವಾರಣೆಗೆ ಹೋರಾಡಿದ ವ್ಯಕ್ತಿ. ಅವರೊಬ್ಬ ಚಿಂತಕ, ಶಿಕ್ಷಣತಜ್ಞ, ಪತ್ರಕರ್ತ ಹಾಗೂ ದಾರ್ಶನಿಕರಾಗದ್ದರು. ಅವರು ಕೇವಲ ಬಂಗಾಳಕ್ಕಲ್ಲ; ಇಡೀ ದೇಶಕ್ಕೇ ಹೆಮ್ಮೆ. ಅವರ ಪುತ್ಥಳಿಯ ಸ್ಥಾಪನೆ ಯುವಜನತೆಗೆ ಸ್ಫೂರ್ತಿ ನೀಡುತ್ತದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.