ಶುಕ್ರವಾರ, ಅಕ್ಟೋಬರ್ 29, 2021
20 °C

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಎನ್‌ಜಿಟಿಗೆ ಇದೆ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪರಿಸರ ಹಿತರಕ್ಷಣೆಯ ವಿಷಯವಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ’ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.

‘ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಎನ್‌ಜಿಟಿ ಪರಿಸರ ಸಂಬಂಧಿ ವಿಷಯಗಳ ಮೇಲೆ ತನ್ನದೇ ವಿಚಾರಣೆ ಮಾಡಬಹುದು’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

‘ಎನ್‌ಜಿಟಿಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇಲ್ಲ. ಸಂವಿಧಾನಿಕ ಪೀಠಗಳಿಗೆ ಮಾತ್ರ ಈ ಅಧಿಕಾರ ಇದೆ’ ಎಂದು ಎನ್‌ಜಿಟಿ ವಿರುದ್ಧ ಕೇಂದ್ರ ಸರ್ಕಾರ ಧಾವೆ ಹೂಡಿತ್ತು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಎನ್‌ಜಿಟಿಗೆ ಒಂದು ವಿಷಯವನ್ನು ಸ್ವಂತಂತ್ರವಾಗಿ ಗ್ರಹಿಸುವ ಅಧಿಕಾರವಿಲ್ಲ. ನ್ಯಾಯಾಧೀಕರಣದ ಅಧಿಕಾರಗಳು ನಿರ್ಬಂಧಗಳಿಂದ ಮುಕ್ತವಾಗಿರುವುದಿಲ್ಲ. ಇದು ಪರಿಸರ ವಿಷಯಗಳ ಬಗ್ಗೆ ವ್ಯವಹರಿಸುವ ಒಂದು ನ್ಯಾಯಪೀಠವಾಗಿದೆ. ಪರಿಸರವು ಯಾರೋ ಒಬ್ಬರಿಗೆ ಸಂಬಂಧಿಸಿಲ್ಲ" ಎಂದು ವಾದಿಸಿದ್ದರು.

ಆದರೆ, ಕೇಂದ್ರದ ವಾದವನ್ನು ಮಾನ್ಯ ಮಾಡದ ನ್ಯಾಯಾಲಯ ಎನ್‌ಜಿಟಿಗೆ ಸು–ಮೋಟೊ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇದೆ ಎಂದು ಹೇಳಿದೆ. ಎನ್‌ಜಿಟಿ ಪರವಾಗಿ ಹಿರಿಯ ವಕೀಲ ಸಂಜಯ್ ಪಾರೇಖ್ ವಾದಿಸಿದ್ದರು.

ಇದನ್ನೂ ಓದಿ: ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್‌ ಲುಕ್‌ನಲ್ಲಿ ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು