ಗುರುವಾರ , ಜೂನ್ 17, 2021
22 °C

ಭಾರತದಲ್ಲಿ ದಾಳಿ ಸಂಚು: ಎಲ್‌ಇಟಿ ಉಗ್ರನಿಗೆ 10 ವರ್ಷ ಜೈಲು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಾಕಿಸ್ತಾನದಿಂದ ಭಾರತದೊಳಕ್ಕೆ ನುಸುಳಿ ಬಂದು ದೆಹಲಿ ಸೇರಿದಂತೆ ಭಾರತದ ಹಲವೆಡೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಪ್ರಕರಣದಡಿ ಎನ್‌ಐಎ ವಿಶೇಷ ನ್ಯಾಯಾಲಯವು ಎಲ್ಇಟಿ ಉಗ್ರನೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಪಾಕಿಸ್ತಾನದ ಲಷ್ಕರ್‌ ಎ ತಯಬಾ ಸಂಘಟನೆಯ (ಎಲ್ಇಟಿ) ಉಗ್ರ ಬಹದ್ದೂರ್‌ ಆಲಿ ವಿರುದ್ಧದ ಆರೋಪ ಸಾಬೀತಾಗಿದೆ. ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶರು ಆತನಿಗೆ 10 ವರ್ಷದ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಓದಿ: 

‘2016ರಲ್ಲಿ ದೆಹಲಿ ಮತ್ತು ಭಾರತದ ಹಲವೆಡೆ ದಾಳಿ ನಡೆಸಲು ಬಹದ್ದೂರ್‌ ಆಲಿ ತನ್ನ ಸಹಚರರಾದ ಅಬು ಸಾದ್‌ ಮತ್ತು ಅಬು ದಾರ್ದಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಗಡಿಯನ್ನು ದಾಟಿ ಬಂದಿದ್ದರು. ಬಹದ್ದೂರ್‌ ಅಲಿಯನ್ನು ಕುಪ್ವಾರಾದಲ್ಲಿ ಬಂಧಿಸಲಾಗಿತ್ತು. 2017ರ ಜನವರಿಯಲ್ಲಿ  ಆರೋಪಪಟ್ಟಿ ಸಲ್ಲಿಸಲಾಗಿತ್ತು’ ಎಂದು ಅಧಿಕಾರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು