ಭಾನುವಾರ, ಏಪ್ರಿಲ್ 11, 2021
21 °C

ಅಯ್ಯಪ್ಪ ಭಕ್ತರಿಗೆ ಹಲ್ಲೆ ನಡೆಸಿ ಸಚಿವರು ಪಾಪ ಮಾಡಿದ್ದಾರೆ: ನಿರ್ಮಲಾ ಸೀತಾರಾಮನ್

ಪಿಟಿಐ‌ Updated:

ಅಕ್ಷರ ಗಾತ್ರ : | |

Finance Minister Nirmala Sitharaman. Credit: PTI Photo

ತಿರುವನಂತಪುರಂ: ಕೇರಳದಲ್ಲಿ ಶಬರಿಮಲೆ ಭಕ್ತರ ಮೇಲೆ ಪೊಲೀಸರ ಮೂಲಕ ಲಾಠಿ ಚಾರ್ಜ್ ನಡೆಸಿದ ದೇವಸ್ವಂ ಸಚಿವ ಕಡಂಪಳ್ಳಿ ಸುರೇಂದ್ರನ್ ಅವರು ಪಾಪ ಕಾರ್ಯ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.

ದರ್ಶನಕ್ಕೆ ತೆರಳುತ್ತಿದ್ದ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ದೇವಸ್ವಂ ಸಚಿವರ ಈ ಪಾಪ ಕಾರ್ಯ 500 ವರ್ಷ ತಪಸ್ಸು ಮಾಡಿದರೂ ಕರಗದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉತ್ತರ ಕೇರಳ ವಿಧಾನಸಭೆ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿರುವ ಅವರು, ದೇವಸ್ವಂ ಸಚಿವ ಕಡಂಪಳ್ಳಿ ಸುರೇಂದ್ರನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

2018ರಲ್ಲಿ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವಿಚಾರವನ್ನೇ ನಿರ್ಮಾಲಾ ಸೀತಾರಾಮನ್ ಚುನಾವಣೆ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಕೂಡ ಶಬರಿಮಲೆ ವಿಚಾರವನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದರು.

ತಿರುವನಂತಪುರಂ ಜಿಲ್ಲೆಯ ಕಾಳಕೂಟಂ ವಿಧಾನಸಭಾ ಕ್ಷೇತ್ರದಿಂದ ಸಿಪಿಎಂನ ಹಿರಿಯ ನಾಯಕ ಕಡಂಪಳ್ಳಿ ಸುರೇಂದ್ರನ್ ಸ್ಪರ್ಧಿಸುತ್ತಿದ್ದು, ಅವರ ವಿರುದ್ಧ ಬಿಜೆಪಿ ಶೋಭಾ ಸುರೇಂದ್ರನ್‌ರನ್ನು ಕಣಕ್ಕಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು