ಶನಿವಾರ, ಮೇ 21, 2022
23 °C

ದೆಹಲಿ: 2020ರ ಏಪ್ರಿಲ್ ‌ಬಳಿಕ ಇದೇ ಮೊದಲ ಸಲ 24 ಗಂಟೆಗಳಲ್ಲಿ ಸಾವಿನ ಪ್ರಕರಣ ಇಲ್ಲ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ‌ ಒಂದೇಒಂದು ಸಾವಿನ ಪ್ರಕರಣ ವರದಿಯಾಗಿಲ್ಲ. 2020ರ ಏಪ್ರಿಲ್‌ ಬಳಿಕ ಇದೇಮೊದಲ ಬಾರಿಗೆ ಒಂದು ದಿನದ ಅವಧಿಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 100 ಜನರಿಗೆ ಕೋವಿಡ್‌-19 ಸೋಂಕು ತಗುಲಿದೆ. ಇದೇ ವೇಳೆ 144 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈ ವರೆಗೆ ಒಟ್ಟು 6,36,260 ಸೋಂಕು ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದರಲ್ಲಿ 6,24,326 ಮಂದಿ ಗುಣಮುಖರಾಗಿದ್ದಾರೆ. 10,882 ಸೋಂಕಿತರು ಮೃತಪಟ್ಟಿದ್ದಾರೆ.

ಸಾವಿನ ಪ್ರಕರಣ ವರದಿಯಾಗದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ʼದೆಹಲಿ ನಿವಾಸಿಗಳಿಗೆ ಸಿಹಿ ಸುದ್ದಿ. ಇಂದು ದೆಹಲಿಯಲ್ಲಿ ಕೋವಿಡ್‌-19ನಿಂದ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ದೆಹಲಿ ನಿವಾಸಿಗಳಿಗೆ ಅಭಿನಂದನೆಗಳು. ಕೊರೊನಾವೈರಸ್‌ ಪ್ರಕರಣಗಳು ಕಡಿಮೆಯಾಗುತ್ತಿವೆ. ಲಸಿಕೆ ಅಭಿಯಾನ ಉತ್ತಮ ವೇಗದಲ್ಲಿ ಸಾಗುತ್ತಿದೆ. ನಗರದ ನಿವಾಸಿಗಳೆಲ್ಲ ಕೊರೊನಾವೈರಸ್‌ ವಿರುದ್ಧ ತುಂಬಾ ಕಠಿಣವಾದ ಯುದ್ಧ ಮಾಡಿದ್ದೇವೆ. ಮುಂದೆಯೂ ಜಾಗರೂಕರಾಗಿರಬೇಕಿದೆʼ ಎಂದು ತಿಳಿಸಿದ್ದಾರೆ.

 

ದೆಹಲಿಯಲ್ಲಿ ಈವರೆಗೆ 1.11 ಕೋಟಿ ಜನರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲಾಗಿದೆ.

ದೇಶದಲ್ಲಿ ಇದುವರೆಗೆ ಒಟ್ಟು 1,05,48,521 ಸೋಂಕಿತರು ಚೇತರಿಸಿಕೊಂಡಿದ್ದು, 1,55,158 ಮಂದಿ ಮೃತಪಟ್ಟಿದ್ದಾರೆ. ಇನ್ನೂ 1,43,625 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು