ಗುರುವಾರ , ಅಕ್ಟೋಬರ್ 21, 2021
29 °C

ತಾಯಿಯಾದ ಸಂಸದೆ ನುಸ್ರತ್‌ ಜಹಾನ್‌: ಮಾಜಿ ಸಂಗಾತಿ ನಿಖಿಲ್‌ ಜೈನ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಕೋಲ್ಕತ್ತದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಸಂಸ್ಥೆ ನ್ಯೂಸ್‌ 18ಗೆ ನುಸ್ರತ್ ಜಹಾನ್ ಮಾಜಿ ಸಂಗಾತಿ ನಿಖಿಲ್‌ ಜೈನ್‌ ಪ್ರತಿಕ್ರಿಯಿಸಿದ್ದಾರೆ.

'ನಾನು ನುಸ್ರತ್ ಜಹಾನ್‌ಗೆ ಒಳ್ಳೆಯದನ್ನು ಬಯಸುತ್ತೇನೆ. ಆರೋಗ್ಯಕರ ಜೀವನ ಮತ್ತು ಸಮೃದ್ಧ ಭವಿಷ್ಯವನ್ನು ಮಗು ಹೊಂದಲಿ. ಅವರಿಬ್ಬರಿಗೂ ಶುಭವಾಗಲಿ' ಎಂದು ನಿಖಿಲ್‌ ಜೈನ್‌ ತಿಳಿಸಿದ್ದಾರೆ.

'ನಾನೀಗ ನುಸ್ರತ್ ಜೊತೆ ಭಾವನಾತ್ಮಕವಾಗಿ ಯಾವುದೇ ಸಂಬಂಧ ಹೊಂದಿಲ್ಲ. ಆ ಕಾರಣ, ಆಕೆಯ ಹೆರಿಗೆಯ ಸುದ್ದಿಯು ನನ್ನ ಭಾವನೆಗಳಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡಿಲ್ಲ' ಎಂದು ಜೈನ್‌ ಹೇಳಿದ್ದಾರೆ.

2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಲ್ ಜೈನ್ ಅವರೊಂದಿಗೆ ನುಸ್ರತ್‌ ಜಹಾನ್‌ ವಿವಾಹವಾಗಿದ್ದರು.

ಕಾನೂನು ಪ್ರಕಾರ ವಿವಾಹ ನೋಂದಾಯಿಸಿಕೊಳ್ಳುವಂತೆ ತಾವು ಮಾಡಿದ ವಿನಂತಿಗಳನ್ನು ನುಸ್ರತ್ ಜಹಾನ್ ನಿರಾಕರಿಸಿದ್ದರು ಎಂದು ನಿಖಿಲ್ ಜೈನ್ 2020ರ ಜೂನ್‌ನಲ್ಲಿ ಆರೋಪಿಸಿದ್ದರು.

ನಿಖಲ್ ಜೈನ್ ಅವರೊಂದಿಗೆ ನಡೆದಿದ್ದ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೊಂಡಿದ್ದರು.

ನುಸ್ರತ್‌ ಜಹಾನ್‌ ಅವರು ನಟ ಯಶ್‌ ದಾಸ್‌ ಗುಪ್ತಾ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇವುಗಳನ್ನೂ ಓದಿ...

ನಿಖಿಲ್‌ ಜೈನ್‌ ಜತೆಗಿನ ಮದುವೆ ಕಾನೂನುಬದ್ಧವಲ್ಲ: ನಟಿ, ಸಂಸದೆ ನುಸ್ರತ್ ಜಹಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು