ಗುರುವಾರ , ಅಕ್ಟೋಬರ್ 21, 2021
29 °C

ವೈರಲ್ ವಿಡಿಯೊ: ನದಿ ಮಧ್ಯ ಆನೆ– ವರದಿ ಮಾಡಲು ತೆರಳಿದ್ದ ಪತ್ರಕರ್ತ ದುರ್ಮರಣ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ್: ಒಡಿಶಾದ ಮಹಾನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೊಂದನ್ನು ರಕ್ಷಿಸಲು ತೆರಳಿದ್ದ ರಕ್ಷಣಾ ಪಡೆಯ ಜೊತೆಗಿದ್ದ ಟಿವಿ ಪತ್ರಕರ್ತರೊಬ್ಬರು ದುರ್ಮರಣಕ್ಕಿಡಾಗಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ಷಣಾ ಪಡೆಯ ಬೋಟ್ ಜೊತೆಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತ ಒಟಿವಿಯ ಅರಿಂದಾಮ್ ದಾಸ್ (39) ಅವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಮೃತರಾಗಿದ್ದು, ಆರು ಜರನ್ನು ರಕ್ಷಿಸಲಾಗಿದೆ.

ಶುಕ್ರವಾರ ಕಟಕ್ ಬಳಿಯ ಮಹಾನದಿಯ ಮುಂದಾಲಿ ಬ್ಯಾರೇಜ್ ಮಧ್ಯದಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿತ್ತು. ಆನೆಯನ್ನು ರಕ್ಷಿಸಲು ಒಡಿಶಾದ ವಿಪತ್ತು ತುರ್ತು ಕಾರ್ಯಾಚರಣೆ ಪಡೆ ತೆರಳಿತ್ತು. ಈ ವೇಳೆ ಅರಿಂದಾಮ್ ದಾಸ್ ಅವರು ಕೂಡ ವರದಿ ಮಾಡಲು ಬೋಟ್‌ನಲ್ಲಿ ರಕ್ಷಣಾ ಪಡೆಯ ಬೋಟ್‌ನಲ್ಲಿ ತೆರಳಿದ್ದರು.

 

ರಕ್ಷಣಾ ಪಡೆಯ ಬೋಟ್‌ಗೆ ಹೆದರಿದ ಆನೆ ನೀರಿನ ಸೆಳೆತ ಹೆಚ್ಚಿದ್ದ ನದಿಯಲ್ಲಿ ಓಡಾಡಿದೆ. ಇದರಿಂದ ಬೋಟ್ ಮುಗುಚಿ ಅನಾಹುತ ಸಂಭಿಸಿದೆ. ಆನೆಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಿಂದಾಮ್ ದಾಸ್ ಅವರು ಒಡಿಶಾದ ಪ್ರಮುಖ ಸುದ್ದಿ ಚಾನೆಲ್ ಒಟಿವಿಯಲ್ಲಿ ಮುಖ್ಯ ವರದಿದಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಚಂಡಮಾರುತ, ನಕ್ಸಲ್ ಕಾರ್ಯಾಚರಣೆ, ಪ್ರಾಕೃತಿಕ ವಿಕೋಪ ಹಾಗು ವನ್ಯಜೀವಿಗಳ ಬಗ್ಗೆ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದರು. ಈ ಮೂಲಕ ಅವರು ಒಡಿಶಾದಲ್ಲಿ ಹೆಸರು ಗಳಿಸಿದ್ದರು.

ಇದನ್ನೂ ಓದಿ: ವಿಡಿಯೊ: ಅವತಾರ ಪುರುಷನಾದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು