ಗುರುವಾರ , ಸೆಪ್ಟೆಂಬರ್ 16, 2021
25 °C

ಆರೋಗ್ಯ ಸೌಲಭ್ಯ; ವಿವಿಧ ವರ್ಗಗಳಲ್ಲಿ ಅಸಮಾನತೆ: ಆಕ್ಸ್‌ಫಾಮ್ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಸಾಮಾನ್ಯ ವರ್ಗದ ಜನರಲ್ಲಿ ಶೇ 66ರಷ್ಟು ಮಂದಿ ಸುಧಾರಿತ ಮತ್ತು ಪ್ರತ್ಯೇಕ ಶೌಚಾಲಯದಂತಹ ನೈರ್ಮಲ್ಯ ವ್ಯವಸ್ಥೆಗಳ ಸೌಲಭ್ಯಗಳನ್ನು ಹೊಂದಿದ್ದರೆ, ಪರಿಶಿಷ್ಟ ಪಂಗಡದವರಲ್ಲಿ ಶೇ 25.9ರಷ್ಟು ಮಂದಿಗೆ ಮಾತ್ರ ಈ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.

ಭಾರತದ ವಿವಿಧ ವರ್ಗಗಳಲ್ಲಿರುವ ಆರೋಗ್ಯ–ನೈರ್ಮಲ್ಯ ಅಸಮಾನತೆ ಕುರಿತು ಆಕ್ಸ್‌ಫಾಮ್‌ ಸಂಸ್ಥೆ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ದಿ ಇಂಡಿಯಾ ಇನ್‌ಈಕ್ವಾಲಿಟಿ ರಿಪೋರ್ಟ್‌– 2021‘ ವರದಿಯಲ್ಲಿ ಇಂಥ ಹಲವು ಮಾಹಿತಿಗಳಿವೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡದ (ಎಸ್‌ಟಿ) ಶೇ 50ರಷ್ಟು ಜನರಿಗೆ‌ ಕೋವಿಡೇತರ ವೈದ್ಯಕೀಯ ಸೌಲಭ್ಯಗಳು ಸಿಗುವುದು ಕಷ್ಟವಾಗಿದೆ. ಆದರೆ, ಸಾಮಾನ್ಯ ವರ್ಗದವರಲ್ಲಿ ಶೇ 18.2 ಮಂದಿಗೆ ಮಾತ್ರ ಇಂಥ ಸೌಲಭ್ಯಗಳಿಗಾಗಿ ಕಷ್ಟಪಡುತ್ತಿದ್ದಾರೆ‘.

ಸಾಮಾನ್ಯ ವರ್ಗದ ಜನರಿಗಿಂತ, ಪರಿಶಿಷ್ಟ ಪಂಗಡದವರ ಮನೆಗಳಲ್ಲಿ ಶೇ 12.6 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ ಎಂಬ ಅಂಶವೂ ವರದಿಯಲ್ಲಿದೆ. ಈ ವರದಿಯ ವಿಶ್ಲೇಷಣೆ ಪ್ರಕಾರ, ಕೋವಿಡ್‌ ಸಾಂಕ್ರಾಮಿಕವು, ದೇಶದಲ್ಲಿ ಹಿಂದೆ ಇದ್ದ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವ ವಿಷಯದಲ್ಲಿ ಮುಸ್ಲಿಂ ಕುಟುಂಬಗಳಿಗಿಂತ ಹಿಂದೂ ಸಮುದಾಯದ ಕುಟುಂಬಗಳು ಮುಂದಿವೆ. ಹಾಗೆಯೇ, ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ(ಐಸಿಡಿಎಸ್‌) ಯೋಜನೆಯಡಿಯಲ್ಲಿ, ಹಿಂದೂ ಕುಟುಂಬಗಳಿಗಿಂತ ಮುಸ್ಲಿಂ ಕುಟುಂಬಗಳು ಶೇಕಡಾ 10 ರಷ್ಟು ಕಡಿಮೆ ಪ್ರಮಾಣದಲ್ಲಿ ಪೂರಕ ಆಹಾರವನ್ನು ಪಡೆಯುತ್ತಿದ್ದಾರೆ‘ ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು