ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶವಾದದ ರಾಜಕೀಯ ಕಾಂಗ್ರೆಸ್ಸಿನ ಏಕೈಕ ಗುರಿ: ಜೆ.ಪಿ. ನಡ್ಡಾ

Last Updated 22 ಮಾರ್ಚ್ 2021, 11:51 IST
ಅಕ್ಷರ ಗಾತ್ರ

ಟಿಂಗ್‌ಖಾಂಗ್ (ಅಸ್ಸಾಂ): ಕಾಂಗ್ರೆಸ್ 'ಅವಕಾಶವಾದದ ರಾಜಕೀಯ'ವನ್ನು ಅಭ್ಯಾಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ಅಧಿಕಾರಕ್ಕೆೇರಲು ಮತ ಚಲಾಯಿಸಿದರೆ ಅಸ್ಸಾಂ 'ಕತ್ತಲೆಯ' ದಿನಗಳತ್ತ ಸಾಗಲಿದೆ ಎಂದು ಹೇಳಿದರು.

ದಿಬ್ರುಗಡ ಜಿಲ್ಲೆಯ ಟಿಂಗ್‌ಖಾಂಗ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಜನರನ್ನು ರಕ್ಷಿಸಲು ಮತ್ತು ಸೇವೆ ಮಾಡಲು ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು.

'ಕಾಂಗ್ರೆಸ್‌ನ ಏಕೈಕ ಗುರಿ ಅವಕಾಶವಾದದ ರಾಜಕೀಯ. ಅವರು ಮುಸ್ಲಿಂ ಲೀಗ್ ಜೊತೆಗಿದ್ದಾರೆ ಮತ್ತು ಕೇರಳದಲ್ಲಿ ಸಿಪಿಐ (ಎಂ) ವಿರುದ್ಧ ಹೋರಾಡುತ್ತಿದ್ದಾರೆ, ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅದರೊಂದಿಗೆ ಕೈಜೋಡಿಸಿದ್ದಾರೆ' ಎಂದು ನಡ್ಡಾ ಹೇಳಿದರು.

ಕಾಂಗ್ರೆಸ್ಸಿಗೆ ಆನೆಯಂತೆ 'ಎರಡು ಹಲ್ಲುಗಳು' ಇವೆ - ಒಂದು ಪ್ರದರ್ಶಿಸಲು ಮತ್ತು ಇನ್ನೊಂದು ಅಗಿಯಲು. ಕಾಂಗ್ರೆಸ್ ಹೇಳುವುದೊಂದು, ಮಾಡುವುದೊಂದು. ಇದು ಸಮಾಜವನ್ನು ವಿಭಜಿಸುತ್ತದೆ' ಎಂದು ಕಾಂಗ್ರೆಸ್ ಮೇಲೆ ಪದೇ ಪದೆ ದಾಳಿ ನಡೆಸಿದ ಅವರು, ವಿರೋಧ ಪಕ್ಷ 'ಅಂದರೆ ಕತ್ತಲೆ' ಎಂದಾದರೆ, ಬಿಜೆಪಿಯು ಅಭಿವೃದ್ಧಿ ಕಡೆಗೆ ನಿಂತಿದೆ ಎಂದರು.

'ನಿಮಗೆ ಕತ್ತಲೆ ಬೇಕಾದರೆ ಕಾಂಗ್ರೆಸ್ ಜೊತೆ ಹೋಗಿ. ಆದರೆ, ಅಭಿವೃದ್ಧಿ ಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯಿರಿ' ಎಂದು ನಡ್ಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT