ಮಂಗಳವಾರ, ಜನವರಿ 18, 2022
22 °C

126 ಕೋಟಿ ಡೋಸ್ ದಾಟಿದ ಕೋವಿಡ್ ಲಸಿಕೆ ನೀಡಿಕೆ: ಆರೋಗ್ಯ ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಶುಕ್ರವಾರದ ವೇಳೆಗೆ 126 ಕೋಟಿ ಡೋಸ್‌ಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶುಕ್ರವಾರ ಒಂದೇ ದಿನ ರಾತ್ರಿ 7 ಗಂಟೆ ವೇಳೆಗೆ 66,58,055 ಡೋಸ್ ಲಸಿಕೆ ನೀಡಲಾಗಿದೆ. ಅಂತಿಮ ವರದಿ ವೇಳೆಗೆ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಸಚಿವಾಲಯ ತಿಳಿಸಿದೆ.

ಓದಿ: 

ಸಚಿವಾಲಯದ ದತ್ತಾಂಶಗಳ ಪ್ರಕಾರ ದೇಶದಲ್ಲಿ ದಿನವೊಂದರಲ್ಲಿ ಸರಾಸರಿ 59.32 ಲಕ್ಷ ಡೋಸ್ ಲಸಿಕೆ ನವೆಂಬರ್‌ನಲ್ಲಿ ನೀಡಲಾಗಿದೆ. ಮೇ ತಿಂಗಳಲ್ಲಿ ದಿನವೊಂದರ ಸರಾಸರಿ ಲಸಿಕೆ ನೀಡಿಕೆ 19.69ರಷ್ಟಿತ್ತು. ಅಕ್ಟೋಬರ್‌ನಲ್ಲಿ ದಿನವೊಂದರ ಸರಾಸರಿ 55.77 ಲಕ್ಷ ಡೋಸ್ ಇದ್ದರೆ, ಸೆಪ್ಟೆಂಬರ್‌ನಲ್ಲಿ 78.69 ಲಕ್ಷ ಹಾಗೂ ಆಗಸ್ಟ್‌ನಲ್ಲಿ ದಿನವೊಂದರ ಸರಾಸರಿ 59.29 ಲಕ್ಷ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು