ಸೋಮವಾರ, ಸೆಪ್ಟೆಂಬರ್ 27, 2021
27 °C
ಕೇಂದ್ರ ಜಾಗೃತ ಆಯೋಗದ ವಾರ್ಷಿಕ ವರದಿಯಲ್ಲಿ ಉಲ್ಲೇಖ

ಭ್ರಷ್ಟಾಚಾರ: 219 ಪ್ರಕರಣಗಳ ತನಿಖೆ ಬಾಕಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದ 219 ಪ್ರಕರಣಗಳು ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ಮಟ್ಟದಲ್ಲಿ ತನಿಖೆಯಾಗದೇ ಉಳಿದಿವೆ. ಇವುಗಳಲ್ಲಿ 105 ಪ್ರಕರಣಗಳು ವಿವಿಧ ಸರ್ಕಾರಿ ಸಂಸ್ಥೆಗಳ ಮಟ್ಟದಲ್ಲಿ ಮೂರು ವರ್ಷಗಳಿಂದ ತನಿಖೆಯಾಗದೇ ಉಳಿದಿವೆ ಎಂದು ಕೇಂದ್ರ ಜಾಗೃತ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

2020ರ ವಾರ್ಷಿಕ ವರದಿಯನ್ನು ಆಯೋಗವು ಮುಂಗಾರಿನ ಅಧಿವೇಶನದಲ್ಲಿ ಸಂಸತ್ತಿನ ಮುಂದೆ ಇರಿಸಿತ್ತು.

‘ಸಿವಿಒಗಳ ತನಿಖೆಗೆ ಶಿಫಾರಸು ಮಾಡಲಾದ ಪ್ರಕರಣಗಳ ತನಿಖೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಆದರೆ ಹೀಗೆ ಶಿಫಾರಸು ಮಾಡಲಾದ 219 ಪ್ರಕರಣಗಳ ತನಿಖಾ ವರದಿ ಇನ್ನೂ ಸಲ್ಲಿಕೆಯಾಗಿಲ್ಲ’ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

‘219ರಲ್ಲಿ 105 ಪ್ರಕರಣಗಳು ಸಿವಿಒಗಳ ಬಳಿ ಮೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಬಾಕಿಯಾಗಿ ಉಳಿದಿವೆ. 58 ಪ್ರಕರಣಗಳು ಒಂದರಿಂದ ಮೂರು ವರ್ಷಗಳಿಂದ ತನಿಖೆಯಾಗದೇ ಉಳಿದಿವೆ. 56 ಪ್ರಕರಣಗಳು ಒಂದು ವರ್ಷದಿಂದ ತನಿಖೆಯಾಗದೇ ಉಳಿದಿವೆ’ ಎಂದು ಆಯೋಗವು ಮಾಹಿತಿ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು