ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ರಷ್ಯಾಗೆ ಆದ ನಷ್ಟವೆಷ್ಟು?

Last Updated 21 ಅಕ್ಟೋಬರ್ 2022, 13:56 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ ವಿರುದ್ಧ ರಷ್ಯಾ ಸಮರ ಸಾರಿ ಇಂದಿಗೆ 240 ದಿನಗಳಾಗಿವೆ. ಈ ವರೆಗೆ 66,740 ಸೈನಿಕರನ್ನು ರಷ್ಯಾ ಕಳೆದುಕೊಂಡಿರುವುದಾಗಿ ಉಕ್ರೇನ್‌ ಸರ್ಕಾರ ಶುಕ್ರವಾರ ಹೇಳಿದೆ.

ಈ ವರ್ಷ ಫೆಬ್ರುವರಿ 24ರಂದು ರಷ್ಯಾ ಸೇನೆಯು ಉಕ್ರೇನ್‌ನಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು.

ಈವರೆಗೆ ರಷ್ಯಾದ 269 ಯುದ್ಧ ವಿಮಾನಗಳನ್ನು ಕೆಡವಿರುವುದಾಗಿಯೂ ಉಕ್ರೇನ್‌ ಹೇಳಿದೆ.

ರಷ್ಯಾದ ಕಡೆ 243 ಹೆಲಿಕಾಪ್ಟರ್‌, 2,573 ಟ್ಯಾಂಕ್‌ಗಳು, 1,325 ಮಾನವರಹಿತ ವೈಮಾನಿಕ ವಾಹನ, 147 ವಿಶೇಷ ಯುದ್ಧ ಸಲಕರಣೆಗಳು, 16 ಯುದ್ಧನೌಕೆ, ಹಡಗುಗಳು ಯುದ್ಧದಲ್ಲಿ ಧ್ವಂಸಗೊಂಡಿರುವುದಾಗಿ ಉಕ್ರೇನ್‌ ಮಾಹಿತಿ ನೀಡಿದೆ.

ಇದರ ಜತೆಗೆ, 5,258 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನ, 1,648 ಫಿರಂಗಿಗಳು, 372 ರಾಕೆಟ್‌ ಉಡಾವಣಾ ವಾಹನಗಳು, 4,006 ಇಂಧನ ಟ್ಯಾಂಕ್‌ಗಳು, 189 ಯುದ್ಧವಿಮಾನ ನಿರೋಧಕ ವ್ಯವಸ್ಥೆ, 329 ಕ್ಷಿಪಣಿಗಳು ಯುದ್ಧದಲ್ಲಿ ನಷ್ಟವಾಗಿರುವುದಾಗಿ ಉಕ್ರೇನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT